ಹೆಚ್.ಡಿ.ಕೆ ಸವಾಲುಗಳಿಗೆ ತತ್ತರಿಸಿಹೋದ ಸಿದ್ದರಾಮಯ್ಯ!

ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಸರ್ಕಾರದ ಪತನಕ್ಕೆ ಬಿಜೆಪಿಯ ದುಷ್ಟ ರಾಜಕೀಯ ಕುತಂತ್ರಗಳು ಎಷ್ಟರ ಮಟ್ಟಿಗೆ ಕಾರಣವೋ, ಕಾಂಗ್ರೆಸ್ ಕೂಡ ಅಷ್ಟೇ ಕಾರಣವೆಂಬುದು ಅರಿಯಲು ರಾಜಕೀಯ ತಜ್ಞರೇ ಆಗಬೇಕಂತೇನಿಲ್ಲ. ಸಿದ್ದರಾಮಯ್ಯ ಆಗ ತಾನೇ ಸ್ವಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ್ದು, ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗುವ ತಮ್ಮ ಆಸೆಗೆ ತಣ್ಣೀರು ಎರಚಿದಂತೆ ಆಗಿತ್ತು.

ತಮ್ಮ ಅಹಂನಿಂದ ರಾಜಕೀಯವಾಗಿ ತಮಗೆ ಜನ್ಮ ನೀಡಿದ ಪಕ್ಷದಿಂದಲೇ ಉಚ್ಛಾಟನೆಗೊಂಡಿದ್ದ ಸಿದ್ದರಾಮಯ್ಯನವರಿಗೆ, ಹೆಚ್.ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಒಪ್ಪಿಕೊಂಡ ಕಾಂಗ್ರೆಸ್ ಹೈ ಕಮಾಂಡ್ ವಿರುದ್ಧ ಉಸಿರು ಎತ್ತುವ ತಾಕತ್ತು ಇರಲಿಲ್ಲ. ಆದರೆ ಎಲ್ಲದಕ್ಕೂ ಸಹಮತವಿರುವಂತೆ ಆಗ ಸಾರ್ವಜನಿಕವಾಗಿ ನಟಿಸುತ್ತಿದ್ದ ಸಿದ್ದರಾಮಯ್ಯನವರ ಮುಖವಾಡ ಈಗ ಕಳಚಿಬಿದ್ದಿದ್ದು, ಅದಕ್ಕೆ ಕಾರಣ ಸ್ವತಃ ಸಿದ್ದರಾಮಯ್ಯನವರೇ.

ತಿರುಳಿಲ್ಲದ ವಿಷಕಾರಿ ವ್ಯಂಗ್ಯ ಆರೋಪಗಳನ್ನು ಮಾಡುವಲ್ಲಿ ನಿಸ್ಸೀಮರಾಗಿರುವ ಸಿದ್ದರಾಮಯ್ಯನವರು ಪದೇ ಪದೇ ಕುಮಾರಸ್ವಾಮಿ ಅವರನ್ನು ಕೆದುಕಿದ ಕಾರಣ ಈಗ ಕುಮಾರಸ್ವಾಮಿ ಅವರು ತಿರುಗಿಬಿದಿದ್ದು, ಅವರ ಬಂಡವಾಳವನ್ನೆಲ್ಲ ಬಯಲು ಮಾಡುತ್ತಿರುವುದು ಸಿದ್ದರಾಮಯ್ಯನವರನ್ನು ನಿಜಕ್ಕೂ ಮುಜುಗರದ ಸನ್ನಿವೇಶಗಳಲ್ಲಿ ಸಿಲುಕಿಸಿದೆ.

ಇತ್ತೀಚೆಗೆ ನ್ಯೂಸ್ ಫಸ್ಟ್ ಕನ್ನಡ ಎಂಬ ಖಾಸಗಿ ವಾಹನಿಯೊಂದರ ಸಂದರ್ಶನದಲ್ಲಿ ಭಾಗವಹಿಸಿದ ಸಿದ್ದರಾಮಯ್ಯನವರಿಗೆ, ನಿರೂಪಕರು ಮೈತ್ರಿ ಸರ್ಕಾರದ ಪತ್ತನದ ಬಗ್ಗೆ ಹಾಗು ಅದರಲ್ಲಿ ಸಿದ್ದರಾಮಯ್ಯನವರು ವಹಿಸಿದ ಪಾತ್ರದ ಬಗ್ಗೆ ಕುಮಾರಸ್ವಾಮಿ ಅವರ ಹೇಳಿಕೆಗಳ ಆಧಾರದ ಮೇಲೆ ಪ್ರಶ್ನೆಗಳನ್ನು ಕೇಳಿದಾಗ ಮೊದಮೊದಲು ಉತ್ತರಿಸಲು ಪ್ರಯತ್ನಿಸಿದ ಸಿದ್ದರಾಮಯ್ಯನವರು, ನಂತರ ಎಲ್ಲಿ ಬಾಯಿ ತಪ್ಪಿ ಸತ್ಯಾಂಶ ಬಯಲಾಗಬಹುದು ಎಂಬ ಭಯದಲ್ಲಿ ಪ್ರಶ್ನೆಗಳನ್ನು ಉತ್ತರಿಸಲು ನಿರಾಕರಿಸಿದರು.

Leave a Reply