ಧರ್ಮೇಗೌಡರ ಡೆತ್ ನೋಟ್ ನಲ್ಲಿ ಯಾರ ಹೆಸರಿದೆ ಗೊತ್ತಾ?

ಜೆಡಿಎಸ್ ನಾಯಕ ಹಾಗು ಕರ್ನಾಟಕ ವಿಧಾನಪರಿಷತ್ ಉಪಸಭಾಪತಿ ಎಸ್.ಎಲ್ ಧರ್ಮೇಗೌಡರ ಆತ್ಮಹತ್ಯೆ ರಾಜಕೀಯ ವಲಯದಲ್ಲಿ ಸ್ಮಶಾನ ಮೌನ ಮರುಗಿಸಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಹಾಗು ಸಿದ್ದರಾಮಯ್ಯ, ಶಾಸಕ ರೇವಣ್ಣ, ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ಗಣ್ಯರು ತಮ್ಮ ಸಹೋದ್ಯೋಗಿಯ ಅಂತ್ಯಕ್ರಿಯೆಯಲ್ಲಿ ಪ್ರಸ್ತುತರಿದ್ದರು. ಮೆಗ್ಗಾನ್ ಆವರಣದಲ್ಲಿರುವ ಶವಾಗಾರದಲ್ಲಿ ಮೃತರ ದೇಹಕ್ಕೆ ತ್ರಿವರ್ಣ ಧ್ವಜವನ್ನು ಹಾಸಿ ಗೌರವ ಸಲ್ಲಿಸಲಾಯಿತು.

ಸುಮಾರು ನಾಲ್ಕು ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ಧರ್ಮೇಗೌಡರಿಗೆ ಅರಿಗಿಸಿಕೊಳ್ಳಲಾಗದೆ, ಆತ್ಮಹತ್ಯೆಯಂತಹ ದುರ್ಮಾರ್ಗದತ್ತ ನೂಕಿದ ಘಟನೆಯಾದರೂ ಏನು ಎಂಬ ಪ್ರಶ್ನೆ ಈಗ ಎಲ್ಲರ ಮೆದುಳಲ್ಲಿ ಮೊಳಕೆ ಒಡೆದಿದೆ. ಅದರಲ್ಲೂ ಕುಮಾರಸ್ವಾಮಿ ಅವರು ಸಹೋದರನಂತೆ ಇದ್ದ ಧರ್ಮೇಗೌಡರು ಸಂತಾಪ ವ್ಯಕ್ತಪಡಿಸುವಾಗ ಧರ್ಮೇಗೌಡರನ್ನು ರಾಜಕೀಯ ಬಲಿ ತೆಗೆದುಕೊಂಡಿದೆ ಎಂದು ಹೇಳಿದ್ದು ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

ಕಳೆದ ವಿಧಾನ ಪರಿಷತ್ ಕಲಾಪದಲ್ಲಿ ನಡೆದ ಘಟನೆ ಧರ್ಮೇಗೌಡರ ಮನಸ್ಥಿತಿಯನ್ನು ಸಾಕಷ್ಟು ಗೊಂದಲಪಡಿಸಿತ್ತು ಎಂಬುದು ಬಲ್ಲ ಮೂಲಗಳು ಖಚಿತ ಪಡಿಸಿದೆ. ಜನರು ಕಾಂಗ್ರೆಸ್ ಪಕ್ಷದತ್ತ ಬೆರಳು ಮಾಡಲು ಶುರು ಮಾಡಿರುವುದು ಗಮನಾರ್ಹ.

Leave a Reply