ಸಿದ್ದರಾಮ್ಮಯ್ಯಗೆ ಕುಲಗುರುವಿನಿಂದ ಛೀಮಾರಿ, ಡಿಕೆಶಿಗೆ ಹುಟ್ಟೂರಿನಲ್ಲಿ ಸೋಲು!

ರಾಜ್ಯದೆಲ್ಲೆಡೆ ಬಹು ಕುತೂಹಲ ಕೆರಳಿಸಿದ ಗ್ರಾಮ ಪಂಚಾಯಿತಿ ಚುನಾವಣೆಗೆ ಇಂದು ತೆರೆ ಬೀಳಲಿದೆ. ಚುನಾವಣೆ ಫಲಿತಾಂಶ ಹಂತ ಹಂತವಾಗಿ ಪ್ರಕಟವಾಗುತ್ತಿದ್ದು, ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕ ಡಿಕೆ ಶಿವಕುಮಾರರ ಹುಟ್ಟೂರು ಆದ ಕನಕಪುರದ ದೊಡ್ಡಾಲಹಳ್ಳಿಯಲ್ಲಿ ಆಘಾತಕಾರಿ ಫಲಿತಾಂಶ ದೊರಕಿದೆ. ಪ್ರಸ್ತುತ 3000 ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿರುವ ಜೆಡಿಎಸ್ ಪಕ್ಷ ಡಿಕೆ ಶಿವಕುಮಾರರ ಹುಟ್ಟೂರಿನಲ್ಲೇ ಅವರಿಗೆ ಮಣ್ಣು ಮುಕ್ಕಿಸಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚಿಗೆ ಒಂದಾದ ಮೇಲೆ ಒಂದರಂತೆ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಿದ್ದು, ಸದಾ ಸುದ್ದಿಯಲ್ಲಿರುತ್ತಾರೆ. ವಿಪಕ್ಷ ನಾಯಕರುಗಳೊಡನೆ ಆರೋಪ- ಪ್ರತ್ಯಾರೋಪ ಹಾಗು ಜಾತಿ – ಧರ್ಮಗಳಿಗೆ ಸಂಬಂಧಿತ ಸೂಕ್ಷ್ಮ ವಿಚಾರಗಳ ಕುರಿತು ವ್ಯಾಖ್ಯೆಗಳು ಹೀಗೆ ಯಾವುದೊ ಒಂದು ವಿಚಾರವಾಗಿ ಸಿದ್ದರಾಮಯ್ಯ ಸದಾ ವಿವಾದದಲ್ಲಿ ಸಿಲುಕಿರುತ್ತಾರೆ. ಆದರೆ ಈಗ ಅವರ ಮೂಲ ವೋಟ್ ಬೇಸ್ ಆದ ಕುರುಬ ಸಮಾಜದಲ್ಲಿಯೇ ಸಿದ್ದರಾಮಯ್ಯ ವಿರುದ್ಧ ಧ್ವನಿ ಅಬ್ಬರಿಸುತ್ತಿದೆ!

“ಯಾವ ನಾಯಕ ಬರಲಿ ಬಿಡಲಿ, ನಾವು ಹೋರಾಟ ಮಾಡೇ ಮಾಡುತ್ತೇವೆ…” ಎಂದು ಸಿದ್ದರಾಮಯ್ಯರ ಕುಲ ಗುರುಗಳಾದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಇದು ಸಿದ್ದರಾಮಯ್ಯ ಕುರುಬ ಜಾತಿಯನ್ನು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಸೇರಿಸಬೇಕು ಎಂದು ಕುರುಬ ಸಮಾಜದಲ್ಲಿ ಭುಗಿಲೆದ್ದಿರುವ ಬೇಡಿಕೆಯ ಕುರಿತು ಅವರು ನೀಡಿದ ಹೇಳಿಕೆ. ಈ ಹೋರಾಟದಲ್ಲಿ ಈಶ್ವರಪ್ಪ ಕೈ ಜೋಡಿಸಿದ್ದಾರೆ ಎಂಎಂಬ ಕಾರಣಕ್ಕೆ ಸಿದ್ದರಾಮಯ್ಯ ಈ ಕಾರಣಕ್ಕೆ ಹೋರಾಟದ ಅವಶ್ಯಕತೆಯೇ ಇಲ್ಲ ಎಂದು ಹೇಳಿ ಕುರುಬ ಸಮಾಜದ ಕೆಂಗಣ್ಣಿಗೆ ಪಾತ್ರರಾಗಿದ್ದಾರೆ.

ಈ ರೀತಿ ಪ್ರಬಲ ನಾಯಕರೇ ಈ ರೀತಿ ನಿರಂತರ ಸೋಲಿಗೆ ಪಾತ್ರರಾಗುತ್ತಿರುವುದು ಹಾಗು ಬೆಂಬಲ ಕಳೆದುಕೊಳ್ಳುತ್ತಿರುವುದು ರಾಜ್ಯ ಕಾಂಗ್ರೆಸ್ ನನ್ನ ಮುಳುಗುತ್ತಿರುವ ಹಡಗಿನ ಪರಿಸ್ಥಿತಿಗೆ ತಂದಿರುವುದು ಸುಳ್ಳಲ್ಲ.

Leave a Reply