ಮೈಸೂರು ಮತ್ತು ತುಮಕೂರಿನಲ್ಲಿ ಪ್ರಾಬಲ್ಯ ಸಾಧಿಸಿದ ಜೆಡಿಎಸ್

ಬಾರಿ ಕುತೂಹಲ ಕೆರಳಿಸಿದ್ದ ಹಾಗು ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ವಿಷಯವಾಗಿರುವ ಕರ್ನಾಟಕ ಗ್ರಾಮ ಪಂಚಾಯಿತಿ ಚುನಾವಣೆಗೆ ನೆನ್ನೆಯ ದಿನ ತೆರೆ ಬಿದ್ದಿದ್ದೆ. ರಾಷ್ಟ್ರೀಯ ಪಕ್ಷಗಳ ಹಣ ಹಾಗು ಅಧಿಕಾರದ ಪ್ರಾಬಲ್ಯದ ನಡುವೆಯೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಸಾರಥ್ಯದ ಪ್ರಾದೇಶಿಕ ಪಕ್ಷ ಜನತಾ ದಳ (ಜಾತ್ಯತೀತ) ಈ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗಮನಾರ್ಹ ಸಾಧನೆಯನ್ನು ಮಾಡಿದೆ.

ಕೆಲವು ಕ್ಷೇತ್ರಗಳಲ್ಲಿ ಹಿಂದಿನ ಚುನಾವಣೆಗಿಂತಲೂ ಹೆಚ್ಚಿನ ಕ್ಷೇತ್ರಗಳನ್ನು ಜೆಡಿಎಸ್ ಪಕ್ಷವು ಗೆದಿದ್ದು, ಹಲವು ಕ್ಷೇತ್ರಗಳಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷಗಳ ದರ್ಪ ಅಡಗಿಸುವಲ್ಲಿ ಸಫಲವಾಗಿದೆ.

ಮೈಸೂರು ಹಾಗು ತುಮುಕೂರು ಗ್ರಾಮ ಪಂಚಾಯಿತಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಜೆಡಿಎಸ್ ಪಕ್ಷದಿಂದ ಒಂದು ಕಾಲು ಆಚೆ ಇಟ್ಟಿರುವ ನಾಯಕರಾದ ಎಸ್.ಆರ್ ಶ್ರೀನಿವಾಸ್ ಹಾಗು ಜಿ.ಟಿ ದೇವೇಗೌಡರಿಗೆ ತಮ್ಮ ಕ್ಷೇತ್ರದ ಮತದಾರರೇ ಒಂದು ಎಚ್ಚರಿಕೆಯ ಸಂದೇಶ ರವಾನೆ ಮಾಡಿರುವಂತೆ ಕಾಣುತ್ತಿದೆ.

Leave a Reply