ಬಿಜೆಪಿ ಕೊಟ್ಟ ದುಡ್ಡು ಖಾಲಿಯಾಗುತ್ತಿದ್ದಂತೆ ಜನರಿಗೆ ಕುಮಾರಣ್ಣ ನೆನಪಾಗುತ್ತಿದ್ದಾರೆ

ಇಂದು ಜೆಡಿಎಸ್ ಪಕ್ಷದ ಅಧಿಕೃತ ಕಚೇರಿಯಾದ ಜೆಪಿ ಭವನದಲ್ಲಿ ರಾಜ್ಯ ಮಟ್ಟದ ನಾಯಕರ ಸಭೆ ನಡೆಯುತ್ತಿದ್ದು, ರಾಜ್ಯದಲ್ಲಿ ಪಕ್ಷದ ಸಮಗ್ರ ಬಲವರ್ಧನೆ ಮಾಡುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು, ಬಹಳಷ್ಟು ಸದ್ದು ಮಾಡುತ್ತಿರುವ ತಮ್ಮ ಇತ್ತೀಚಿನ ಹಲವು ಸಂದರ್ಶನಗಳು ಹಾಗು ಮಾಧ್ಯಮಘೋಷ್ಠಿಗಳಲ್ಲಿ ಹೊಸ ವರ್ಷ ಉರುಳುತ್ತಿದ್ದಂತೆ ಪಕ್ಷವನ್ನು ನವೀಕರಣ ಮಾಡುವ ತಮ್ಮ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ್ದರು. ಅದರಂತೆ ಪಕ್ಷದ ಜನಕ ಹೆಚ್.ಡಿ ದೇವೇಗೌಡರು, ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ, ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಪಾಲ್ಗೊಂಡಿರುವ ಇಂದಿನ ಕಾರ್ಯಕ್ರಮ ಆ ಪಥದತ್ತ ಮೊದಲ ಹೆಜ್ಜೆ ಎನ್ನಬಹುದು.

ಪಕ್ಷದ ಎಲ್ಲಾ ಜಿಲ್ಲಾಧ್ಯಕ್ಷರು ತಮ್ಮ ತಮ್ಮ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಯಾವ ರೀತಿ ತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಹಂಚಿಕೊಳ್ಳುತ್ತಿದ್ದಾರೆ. ಈ ವೇಳೆ ಚಿಲ್ಲರೆ ಕಾಸು ಹಾಗು ಮದ್ಯದ ಕ್ಷುಲ್ಲಕ ಆಸೆಗೆ ಬಿಜೆಪಿಗೆ ತಮ್ಮ ಮತ ಮಾರಿಕೊಂಡ ಜನರಿಗೆ ಈಗ ತಮ್ಮ ಕೈಯಲ್ಲಿ ಆ ಹಣವೆಲ್ಲ ಖಾಲಿಯಾಗುತ್ತಿದ್ದಂತೆ ಕುಮಾರಣ್ಣನ ನೆನಪಾಗುತ್ತಿದ್ದರೆ ಎಂದು ಹಲವಾರು ನಾಯಕರು ವರದಿ ಮಾಡಿದ್ದಾರೆ.

Leave a Reply