ವಿಧಾನ ಸೌಧದಲ್ಲಿ ಅಶ್ಲೀಲ ಚಿತ್ರಣಗಳನ್ನು ವೀಕ್ಷಿಸುತ್ತಿದ್ದ ತಮ್ಮ ಪಕ್ಷದ ನಾಯಕರನ್ನು ಸಮರ್ಥಿಸಿಕೊಂಡಿದ್ದ ಕಾನೂನು ಮಂತ್ರಿ ಜೆಸಿ ಮಾಧುಸ್ವಾಮಿ ಈಗ ತಾವೇ ಸರ್ಕಾರೀ ಅಧಿಕಾರಿಯೊಬ್ಬರ ವಿರುದ್ಧ ಅಶ್ಲೀಲ ಭಾಷಾಪ್ರಯೋಗ ಮಾಡಿ ಮತ್ತೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.
ಇಂದು ತುಮುಕೂರಿನ ಕೆಡಿಪಿ ಸಭೆಯಲ್ಲಿ ಎಇಇ ರಂಗಸ್ವಾಮಿ ಅವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ರಭಸದಲ್ಲಿ ಮಾಧುಸ್ವಾಮಿ ಬಹಿರಂಗವಾಗಿ ಅವರನ್ನು ನಿಂಧಿಸಿದ್ದಾರೆ. ಇದು ಬಿಜೆಪಿಯ ದಬ್ಬಾಳಿಕೆ ಕಾರ್ಯವೈಖರಿಯ ಮತ್ತೊಂದು ಉದಾಹರಣೆ.
ತಮ್ಮ ದುರಹಂಕಾರಕ್ಕೆ ಕುಖ್ಯಾತರಾಗಿರುವ ಮಾಧುಸ್ವಾಮಿ ಸರ್ಕಾರೀ ಅಧಿಕಾರಿಗೆ “ಜಾಡಿಸಿ ಒದ್ದರೆ ಈಗ ಎಲ್ಲಿ ಹೋಗಿ ಬಿದ್ದಿರ್ತೀಯಾ ಗೊತ್ತಾ? ರಾಸ್ಕಲ್!” ಎಂದು ಅರಚಾಡಿದ್ದಾರೆ. ಹಾಗು ಮಾಧುಸ್ವಾಮಿ ಅವರ ಹೀಗೆ ಅಧಿಕಾರಿಗಳೊಡನೆ ಅಗೌರವವಾಗಿ ನೆಡೆದುಕೊಂಡಿರುವುದು ಇದೇನು ಮೊದಲ ಬಾರಿಯಲ್ಲಿ. ಇದು ಬಿಜೆಪಿ ಪಕ್ಷದ ಘನತೆ ಹಾಗು ಶಿಸ್ತು ಎಷ್ಟು ಕೀಳು ಮಟ್ಟದಲ್ಲಿದೆ ಎಂದು ತೋರುತ್ತದೆ.