ಎಸ್.ಆರ್ ಶ್ರೀನಿವಾಸ್ ಎಚ್ಚೆತ್ತುಕೊಂಡರು, ಜಿಟಿ ದೇವೇಗೌಡ ಎಚ್ಚಿತ್ತುಕೊಳ್ಳೋದು ಯಾವಾಗ?

ಒಂದು ಕುಟುಂಬ ಅಥವಾ ತಂಡದಲ್ಲಿ ಸದಸ್ಯರ ನಡುವೆ ಭಿನ್ನಾಪ್ರಾಯಗಳು ಹಾಗು ಪರಸ್ಪರ ಮುನಿಸು, ಕೋಪ, ಬೇಸರ ಇವೆಲ್ಲವೂ ಸರ್ವೇ ಸಾಮಾನ್ಯ. ಅದೇ ರೀತಿ ಒಂದಷ್ಟು ಸಿದ್ದಾಂತಗಳನ್ನು ನಂಬುವ, ತಾವು ನೆಲೆಸುವ ನಾಡು ಹೇಗಿದ್ದರೆ ಚೆಂದ ಎಂಬ ಕಲ್ಪನೆ ಹೊಂದಿರುವ, ಆ ಕಲ್ಪನೆಯನ್ನು ಹೇಗೆ ವಾಸ್ತವ ಮಾಡಬಹುದು ಎಂಬ ಯೋಜನೆ ಹೊಂದಿರುವ ಹಲವರು ಸೇರಿ ಒಂದು ರಾಜಕೀಯ ಪಕ್ಷ ಕಟ್ಟಿರುತ್ತಾರೆ. ರಕ್ತ ಸಂಬಂಧದಂತ ಗೋಂದು ಸೈದಾಂತಿಕ ಸಂಬಂಧವಲ್ಲದಿದ್ದರೂ ಸಹ, ತಕ್ಕ ಮಟ್ಟಿಗೆ ಪಕ್ಷಕ್ಕೆ ತಮ್ಮ ನೈತಿಕತೆ ಹಾಗು ಬದ್ಧತೆಯನ್ನು ಸದಸ್ಯರುಗಳು ಹೂಡಿಕೆ ಮಾಡುವುದು ಅನಿವಾರ್ಯ.

ಆದ್ದರಿಂದ ಸದಸ್ಯರುಗಳು ಕ್ಷುಲ್ಲಕ ಮನಸ್ತಾಪಗಳಿಗೆ ಅಥವಾ ದುರಾಸೆಗಳಿಗೆ ಪಕ್ಷಕ್ಕೆ ಹಾಗು ತಮ್ಮ ಧ್ಯೇಯಕ್ಕೆ ಕಂದಕ ತೋಡುವುದು ತಮ್ಮ ಸೈದ್ಧಾಂತಿಕ ಬದ್ಧತೆಯನ್ನು ದುರ್ಬಲವಾಗಿ ಕಾಣುವಂತೆ ಮಾಡುತ್ತದೆ. ಇದು ಜೆಡಿಎಸ್ ಪಕ್ಷದ ನಾಯಕ ಎಸ್.ಆರ್ ಶ್ರೀನಿವಾಸ್ (ಗುಬ್ಬಿ) ಅವರಿಗೆ ಅರಿವಾದಂತ್ತಿದೆ. ಆದರೆ ಪಕ್ಷದ ಒಗ್ಗಟ್ಟಿನ ಬಗ್ಗೆ ಲೇವಡಿ ಮಾಡಲು ಅವಕಾಶ ಮಾಡಿಕೊಡುವಂತಹ ಚಟುವಟಿಕೆಗಳಲ್ಲಿ ಆಗಾಗ ತೊಡಗಿಸಿಕೊಳ್ಳುವ ಚಟ ಹೊಂದಿರುವ ಅವರ ಸಹಪಾಠಿ ಜಿ.ಟಿ ದೇವೇಗೌಡರು ಮಾತ್ರ ಇನ್ನೂ ಮಂಪರಿನಲ್ಲಿ ಇರುವಂತೆ ಕಾಣುತ್ತಿದೆ.

ಗುರುವಾರ ಬೆಂಗಳೂರಿನ ಜೆಡಿಎಸ್ ಜನಕ ಹೆಚ್.ಡಿ ದೇವೇಗೌಡರ ನೇತೃತ್ವದಲ್ಲಿ ಹಾಗು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ರಾಜ್ಯ ಮಟ್ಟದ ನಾಯಕರ ಸಭೆಯೊಂದನ್ನು ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧ್ಯಕ್ಷರುಗಳು ಪಕ್ಷ ಸಂಘಟನೆಗೆ ತಮ್ಮ ಯೋಜನೆಗಳನ್ನು ಪ್ರಸ್ತುತ ಪಡಿಸುವ ಮೂಲಕ ‘ಕುಮಾರ ಪರ್ವ’ಕ್ಕೆ ಚಾಲನೆ ನೀಡುವ ಉದ್ದೇಶವನ್ನು ಇಟ್ಟುಕೊಂಡು ಆಯೋಜಿಸಿದ್ದ ಸಭೆ ಇದಾಗಿತ್ತು. ಈ ಸಭೆಯಲ್ಲಿ ಪಕ್ಷದ ಬಹುತೇಕ ಎಲ್ಲಾ ಪ್ರಬಲ ನಾಯಕರು ಹಾಜರಾಗಿದ್ದರು, ಜಿಟಿ ದೇವೇಗೌಡರೊಬ್ಬರನ್ನು ಬಿಟ್ಟು.

Leave a Reply