ಬೆಂಗಳೂರು ಸಿಸಿ ಕ್ಯಾಮೆರಾ ಅಳವಡಿಕೆಯಲ್ಲಿ ಬಿಜೆಪಿ ಸರ್ಕಾರ ಬಾರಿ ಭ್ರಷ್ಟಾಚಾರ!

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಲಗಾಮು ಹಿಡಿದಾಗಲಿನಿಂದಲೂ ಯಾವುದೇ ರೀತಿಯ ಘಣನೀಯ ಸಾಧನೆಗಳನ್ನು ಮಾಡಿರುವುದಿರಲಿ, ರಾಜ್ಯದ ಅಭಿವೃದ್ಧಿಗೆ ತಮ್ಮ ಯೋಜನೆಗಳನ್ನೂ ಸಹ ಮುಕ್ತವಾಗಿ ಇನ್ನೂ ಪ್ರಸ್ತಾಪಿಸಿಲ್ಲ. ಇದೇ ಕಾರಣದಿಂದಾಗಿ ವಿಪಕ್ಷಗಳು ಬಿಜೆಪಿ ಸರ್ಕಾರ ಇನ್ನೂ ಟೇಕ್ ಆಫ್ ಕೂಡ ಆಗಿಲ್ಲ ಎಂದು ಆರೋಪಿಸುತ್ತಿದ್ದು, ಇದರ ಕುರಿತು ಎರಡು ಮಾತು ಆಡುವಂತಿಲ್ಲ.

ಈವರೆಗೂ ಕೇವಲ ಕಳಪೆ ಆಡಳಿತಕ್ಕೆ ತೃಪ್ತಿಪಟ್ಟಿರುವ ಬಿಜೆಪಿ ಸರ್ಕಾರದ ನಿಯಂತ್ರಕ ಯಡಿಯೂರಪ್ಪ ತಮ್ಮ ಹಳೆ ಚಾಳಿಯಾದ ಭ್ರಷ್ಟಾಚಾರವನ್ನು ಮುಂದುವರಿಸಿರುವುದಕ್ಕೆ ಕಳೆದ ಒಂದೂವರೆ ವರ್ಷಗಳಲ್ಲಿ ಸಾಕಷ್ಟು ಉದಾಹರಣೆಗಳು ರಾಜ್ಯದ ಜನರ ಕಣ್ಣು ಮುಂದಿದೆ. ಹಾಗು ಅದಕ್ಕೆ ಅನುಗುಣವಾಗಿ ಈಗ ಮತ್ತೊಂದು ಪ್ರಕರಣ ಬಯಲಾಗಿದೆ. ಅದೇ ರಾಜಧಾನಿ ಬೆಂಗಳೂರಿಗೆ ಸಿಸಿ ಟಿವಿ ಅಳವಡಿಕೆಯ ಹೆಸರಿನಲ್ಲಿ ಪ್ರಜೆಗಳ ತೆರಿಗೆ ಹಣವನ್ನು ನುಂಗಿ ನೀರು ಕುಡಿಯುತ್ತಿರುವುದು.

ಬೆಂಗಳೂರು ನಗರದಲ್ಲಿ ಅವಶ್ಯ ಸ್ಥಳಗಳಿಗೆ ಸಿಸಿ ಟಿವಿ ಅಳವಡಿಸಲು ತಯಾರಿ ನಡೆಸುತ್ತಿರುವ ಬಿಜೆಪಿ ಸರ್ಕಾರ ಬಾರಿ ಭ್ರಷ್ಟಾಚಾರ ಎಸಗಿದೆ. ದೆಹಲಿಯ ಆಮ್ ಆದ್ಮಿ ಪಕ್ಷ ಪ್ರಮುಖ ಸ್ಥಳಗಳಲ್ಲಿ ಮೊದಲ ಹಂತದಲ್ಲಿ ಸುಮಾರು 1.4 ಲಕ್ಷ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದು, ದೆಹಲಿಯಲ್ಲಿ ಅಳವಡಿಸಿರುವ ಅತ್ಯುತ್ತಮ ಗುಣ ಮಟ್ಟದ ಸಿಸಿ ಟಿವಿ ಕ್ಯಾಮೆರಾ ಬೆಲೆ 40 ಸಾವಿರ, ಆದರೆ ನಮ್ಮಲ್ಲಿ 8 ಲಕ್ಷ! ಅತ್ಯುತ್ತಮ ಸರ್ಕಾರಿ ಸಂಸ್ಥೆ ಬಿಇಎಲ್ ದೆಹಲಿಯಲ್ಲಿ ಉತ್ತಮ ಗುಣಮಟ್ಟದ ಸೇವೆ ನೀಡಿದ್ದು, 1.4 ಲಕ್ಷ ಕ್ಯಾಮೆರಾಗಳಿಗೆ ಖರ್ಚಾಗಿರುವುದು 572 ಕೋಟಿ, ಬೆಂಗಳೂರಿನಲ್ಲಿ ಅಳವಡಿಸುತ್ತಿರುವ ಕೇವಲ 7,500 ಕ್ಯಾಮೆರಾಗಳಿಗೆ 619 ಕೋಟಿ.

ಇದೇ ರೀತಿ ಬಿಜೆಪಿ ಸರ್ಕಾರ ಜನರ ತೆರಿಗೆ ಹಣವನ್ನು ಗುಳುಂ ಸ್ವಾಹಾ ಮಾಡುತ್ತಿದ್ದರೇ ಅಧಿಕಾರಾವಧಿ ಮುಗಿಯುವಷ್ಟರಲ್ಲಿ ಸರ್ಕಾರ ದಿವಾಳಿ ಎದ್ದು ರಾಜ್ಯ 20 ವರ್ಷ ಹಿಂದಿನ ಸ್ಥಿತಿ ತಲುಪುವುದರಲ್ಲಿ ಸಂಶಯವಿಲ್ಲ!

Leave a Reply