ನಾನು ಗೋಮಾಂಸ ತಿನ್ನೋದೇ ಇಲ್ಲ – ಉಲ್ಟಾ ಹೊಡೆದ ಸಿದ್ದರಾಮಯ್ಯ

ಯೂಟ್ಯೂಬ್ನಲ್ಲಿ ‘ಸಿದ್ದರಾಮಯ್ಯ ಗೋಮಾಂಸ’ ಎಂದು ಹುಡಿಕಿದರೆ ಕಳೆದ ಹಲವು ವರ್ಷಗಳಿಂದ ಮಾಜಿ ಮುಖ್ಯಮಂತ್ರಿ ಸಿದ್ದರಮ್ಮಯ್ಯ ಗೋಮಾಂಸ ನಿಷೇಧದ ಬಗ್ಗೆ ಮುಕ್ತವಾಗಿ, ಖಾರವಾಗಿ ತಮ್ಮ ಅಭಿಪ್ರಾಯಗಳನ್ನು, ನಿಲುವನ್ನು ಏರುಧ್ವನಿಯಲ್ಲಿ ತಮ್ಮ ಅಭಿಮಾನಿಗಳ ಮುಂದೆ, ಮಾಧ್ಯಮಗಳ ಮುಂದೆ ಬಡಬಡಾಯಿಸಿರುವ ತುಣುಕುಗಳು ದೊರೆಯುತ್ತವೆ. ಆದರೆ ಈಗ ಸಿದ್ದರಾಮಯ್ಯ ತಮ್ಮ ವರಸೆಯನ್ನೇ ಬದಲಾಯಿಸಿದ್ದಾರೆ!

“ಹೌದು, ನಾನು ಗೋಮಾಂಸ ತಿನ್ನುತ್ತೇನೆ. ಅದನ್ನು ಕೇಳಲು ನೀನ್ಯಾರು? ನನ್ನ ಆಹಾರ ಪದ್ಧತಿ ನನ್ನ ಸ್ವಯಿಚ್ಛೆ. ಅದನ್ನು ಪ್ರಶ್ನಿಸಲು ನಿನಗೇನೂ ಹಕ್ಕಿದೆ?” ಎಂದು ವಿವಾದಾತ್ಮಕ ನಾಯಕ ಸಿದ್ದರಾಮಯ್ಯ ಹಲವು ಬಾರಿ ಭಾಷಣ ಮಾಡಿದ್ದಾರೆ. ಆದರೆ ಈಗ “ನಾನು ಗೋಮಾಂಸ ಈವರೆಗೂ ಸೇವಿಸಿಲ್ಲ, ಮುಂದೆಂದೂ ಸೇವಿಸೋದು ಇಲ್ಲ” ಎಂದು ಹೇಳಿಕೆ ನೀಡಿರುವುದು ಬಹಳಷ್ಟು ಅಚ್ಚರಿ ಮೂಡಿಸಿದೆ. ಹಾಗಾದರೆ ಸೈದ್ಧಾಂತಿಕ ನಿಲುವಿನ ದೃಢತೆಯ ಬಗ್ಗೆ ಅಷ್ಟೊಂದು ಬೋಧಿಸುವ ಸಿದ್ದರಾಮಯ್ಯ, ದಿಢೀರನೆ ಏಕಾಏಕಿ ಈ ರೀತಿ ತಮ್ಮ ನಿಲುವನ್ನು ಬದಲಾಯಿಸಲು ಕಾರಣವಾದರೂ ಏನು? ಅಧಿಕಾರ ದಾಹ.

ಹೌದು, ವಿರೋಧ ಪಕ್ಷದ ಜವಾಬ್ದಾರಿಯನ್ನು ಮರೆತು ಎರಡೂವರೆ ವರ್ಷಗಳ ನಂತರ ನಡೆಯುವ ಚುನಾವಣೆಯಲ್ಲಿ ಒಂದು ವೇಳೆ ತಮ್ಮ ಪಕ್ಷ ಬಹುಮತ ಪಡೆದರೆ ಮುಖ್ಯಮಂತ್ರಿ ಯಾರಾಗಬೇಕು ಎಂದು ಈಗಿಲಿನಿಂದಲೇ ಹೊಡೆದಾಡುತ್ತಿರುವ ಕಾಂಗ್ರೆಸ್ ಪಕ್ಷದ ಹೈ ಕಮಾಂಡ್ ಸಿದ್ದರಾಮ್ಮಯ್ಯನವರಿಗೆ ತಮ್ಮ ಮನಬಂದಂತೆ ನಾಲಿಗೆ ಹಾರಿಬಿಡುವ ಬಗ್ಗೆ ಶಿಸ್ತು ಕ್ರಮ ಕೈಗೊಂಡಂತ್ತಿದೆ. ದೇಶದ ಬಹುಸಂಖ್ಯಾತರು ಗೋಮಾಂಸ ನಿಷೇಧವನ್ನು ಸಂಭ್ರಮಿಸುತ್ತಿರುವಾಗ ಅದನ್ನು ತೀರಾ ಕಠಿಣವಾಗಿ ತಿರಸ್ಕರಿಸುವುದು, ಟೀಕಿಸುವುದು ಕುಸಿಯುತ್ತಿರುವ ಕಟ್ಟಡವಾದ ಕಾಂಗ್ರೆಸ್ ಗೆ ಸುರಕ್ಷಿತವಲ್ಲವೆಂದು ಅರಿವಾದಂತ್ತಿದೆ. ಆದ್ದರಿಂದ ಸಿದ್ದರಾಮ್ಮಯ್ಯನವರು ಹೈ ಕಮಾಂಡ್ ನಾ ನಿರ್ದೇಶನದಂತೆ ತಮ್ಮ ವರಸೆಯನ್ನೇ ಬದಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇಷ್ಟು ದಿನಗಳು ತಮ್ಮ ಸಿದ್ಧಾಂತಗಳ ಬಗ್ಗೆ ತಾವು ಹೊಂದಿರುವ ಅಚಲ ಮನಸ್ಥಿತಿಯ ಬಗ್ಗೆ ಸಾಕಷ್ಟು ಗರ್ವ ಹೊಂದಿದ್ದ ಸಿದ್ದರಾಮಯ್ಯ, ತಾವು ಕೂಡ ಎಲ್ಲಾ ಸ್ವಾರ್ಥ ರಾಜಕಾರಣಿಗಳಂತೆ ಚುನಾವಣೆ ಗೆಲ್ಲುವುದಕ್ಕೆ, ಅಧಿಕಾರದ ಚುಕ್ಕಾಣಿ ಹಿಡಿಯುವದಕ್ಕೆ ನೀರಿನ ರೀತಿ ಹೊಂದಿಕೊಳ್ಳುತ್ತಾರೆ ಎಂಬುದನ್ನು ಇದರ ಮೂಲಕ ಸಾಬೀತು ಪಡಿಸಿದ್ದಾರೆ.

ಹಾಗಿದ್ದರೆ ಇನ್ನು ಮುಂದೆ ರಾಜ್ಯ ಬಿಜೆಪಿ ಹೈ ಕಮಾಂಡ್ ನ ಗುಲಾಮರು ಎಂದು ಟೀಕಿಸುವ, ಅಥವಾ ಜೆಡಿಎಸ್ ಪಕ್ಷಕ್ಕೆ ಸೈದ್ಧಾಂತಿಕ ಬದ್ಧತೆ ಇಲ್ಲ ಎಂದು ಆರೋಪಿಸುವ ನೈತಿಕತೆ ಸಿದ್ದರಾಮಮಯ್ಯ ಹೊಂದಿರುತ್ತಾರೆ?

Leave a Reply