ಒಂದೂವರೆ ವರ್ಷದಲ್ಲಿ ಸರ್ಕಾರದ ಖಜಾನೆಯನ್ನು ನುಂಗಿ ನೀರು ಕುಡಿದ ಬಿಜೆಪಿ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರವು ಕೇವಲ ಒಂದೂವರೆ ವರ್ಷದಲ್ಲಿ ಸಂಪತ್ಭರಿತ ಸರ್ಕಾರವನ್ನು ಬರ್ಬಾದ್ ಮಾಡುವಲ್ಲಿ ಯಶಸ್ವಿಯಾಗಿದೆ. ಇದನ್ನು ಸ್ವತಃ ಮುಖ್ಯಮಂತ್ರಿಯವರೇ ನೆನ್ನೆಯ ದಿನ ದೃಢಪಡಿಸಿದ್ದಾರೆ.

ಕೊರೋನಾ ಹಾಗೂ ನೆರೆ ಸಂತ್ರಸ್ತರು ಸರ್ಕಾರದಿಂದ ಪಡೆದ ನೆರವು ಎಳ್ಳಿನಷ್ಟಾಗಿದ್ದು, ಬೆಟ್ಟದಷ್ಟಿದ್ದ ಸರ್ಕಾರದ ಖಜಾನೆಯ ಸಂಪತ್ತನ್ನು ಕರಗಿಸಲು ರಾಜ್ಯ ಸರ್ಕಾರ ಮಾಡಿದ ಅನಾಚಾರಗಳಿಗೆ ತ್ಯಾಪೆ ಹಾಕಿ ಅವಸಿಡುತ್ತಿದೆ. ಹಾಗು ಈ ಸನ್ನಿವೇಶಗಳನ್ನು ದುರುಪಯೋಗ ಪಡೆದುಕೊಳ್ಳುತ್ತಿರುವ ಅವರ ಕುತಂತ್ರ ಆಡುವ ಮಕ್ಕಳಿಗೂ ತಿಳಿಯುವಂತ್ತದ್ದ.

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಮ್ಮ ಅಧಿಕಾರಾವಧಿ ಮುಗಿದ ದಿನದಿಂದಲೂ ತಾವು ತುಂಬಿದ ಖಜಾನೆಯನ್ನು ಬಿಟ್ಟು ಬಂದಿರುವುದರ ಬಗ್ಗೆ ಹಲವು ಬಾರಿ ಪ್ರಸ್ತಾಪಿಸಿದ್ದಾರೆ. ಅಲ್ಪ ವಿರಾಮದ ನಂತರ ಜೆಡಿಎಸ್ ಪಕ್ಷದ ಎದುರಾಳಿ ಸ್ಥಾನವನ್ನು ಪುನಃ ಅಲಂಕರಿಸಿರುವ ಕಾಂಗ್ರೆಸ್ ಪಕ್ಷವಾಗಲಿ, ಬಿಜೆಪಿ ಪಕ್ಷವಾಗಲಿ ಇದರ ವಿರುದ್ಧ ಉಸಿರು ಎತ್ತಿಲ್ಲ. ಒಬ್ಬರನೊಬ್ಬರ ಕಾಲು ಎಳೆಯಲು ಬಕ ಪಕ್ಷಿಗಳಂತೆ ಕಾಯುವ ರಾಜಕಾರಣಿಗಳು ಒಂದು ವೇಳೆ ಕುಮಾರಸ್ವಾಮಿ ಅವರ ಹೇಳಿಕೆಯಲ್ಲಿ ಸತ್ಯಾಂಶ ಹೊರೆತು ಪಡಿಸಿ ಬೇರೇನೇ ಇದ್ದಿದ್ದರೂ ಹಸಿದ ತೋಳಗಳಂತೆ ದಾಳಿ ಮಾಡುತ್ತಿದ್ದರು ಎಂಬುದರ ಬಗ್ಗೆ ಸಂದೇಹವಿಲ್ಲಾ! ಒಂದು ವೇಳೆ ಇದರ ಬಗ್ಗೆ ಹೆಚ್ಚಾಗಿ ಕೆದುಕಿದರೆ ದೂಷಣೆ ರಾಜಕಾರಣದಲ್ಲಿ ಪೂರ್ಣಾಂಕ ಪಡೆದಿರುವ ಕೇಂದ್ರ ಬಿಜೆಪಿಯ ಹೆಜ್ಜೆಗುರಿತನ್ನು ಹಿಂಬಾಲಿಸಲು ರಾಜ್ಯ ಬಿಜೆಪಿ ಹೇಸುವುದಿಲ್ಲ.

Leave a Reply