ಯಡಿಯೂರಪ್ಪನಿಗೆ ಯಡಿಯೂರು ಸಿದ್ದಲಿಂಗೇಶ್ವರನೂ ಒಳ್ಳೆಯದು ಮಾಡಲ್ಲ: ಹೆಚ್ ವಿಶ್ವನಾಥ್

ರಾಜ್ಯ ರಾಜಕೀಯದಲ್ಲಿ ಬಾರಿ ಕುತೂಹಲ ಕೆರಳಿಸಿದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಸಂಪುಟ ವಿಸ್ತರಣೆಗೆ ಕೊನೆಗೂ ಇಂದು ತೆರೆ ಬೀಳಲಿದೆ. ಹಲವು ತಿಂಗಳುಗಳಿಂದ ಬಿಜೆಪಿ ವಲಯದಲ್ಲೇ ಈ ಬಗ್ಗೆ ಸಾಕಷ್ಟು ಗಲಭೆ ಸೃಷ್ಟಿಯಾಗಿದ್ದು ಯಡಿಯೂರಪ್ಪನವರ ಮೇಲೆ ಸಾಕಷ್ಟು ಒತ್ತಡ ಹೇರಲಾಗುತಿತ್ತು. ಆದರೆ ಯಡಿಯೂರಪ್ಪ ಹಾಗೋ ಹೀಗೋ ಸಚಿವ ಸಂಪುಟ ವಿಸ್ತರಣೆ ಮಾಡಿದ ನಂತರವೂ ಸಹ ಈ ವಿಷಯಕ್ಕೆ ಸಂಬಂಧಿಸಿದಂತೆ ಕೈ ತೊಳೆದುಕೊಂಡು ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ. ಏಕೆಂದರೆ ಇದು ಬಹುಮತ ಗಳಿಸಿ ಸ್ಥಾಪಿಸಿರುವ ಸರ್ಕಾರವಲ್ಲ, ಹೊರತಾಗಿ 17 ಜನ ಶಾಸಕರ ಕರುಣೆಯ ಫಲವಾಗಿ ಸ್ಥಾಪಿಸಿರುವ ಸರ್ಕಾರ. ಆದ್ದರಿಂದ ಅದು ಅಸಂಭವ!

ಒಂದು ವೇಳೆ ಯಡಿಯೂರಪ್ಪ ರಾಜ್ಯದ ಜನರ ವಿಶ್ವಾಸ ಗಳಿಸಿ ಬಹುಮತ ಪಡೆದುಕೊಂಡಿದ್ದರೂ ಸಹ ಕೇಂದ್ರ ಬಿಜೆಪಿ ಆಯೋಗ ಯಡಿಯೂರಪ್ಪನವರಿಗೆ ಬೇಕಾದ್ದವರನ್ನು ಮಂತ್ರಿ ಮಾಡಲು ಅಭಿವ್ಯಕ್ತ ಸ್ವತಂತ್ರವೇನೂ ನೀಡುತ್ತಿರಲಿಲ್ಲ. ಆದರೆ ಕನಿಷ್ಠ ಪಕ್ಷ ಅವರು ಕೆಲವರ ಋಣದ ಬಾರ ಹೊರುತ್ತಲೇ ತಮ್ಮ ಅಧಿಕಾರಾವಧಿ ಕಳೆಯುವಂತ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತಿರಲಿಲ್ಲ. ಯಾವುದೊ ಹುರುಪಿನಲ್ಲಿ ಸಚಿವರಿಗೆ ಮಂತ್ರಿಗಿರಿಯ ನಿರೀಕ್ಷೆ ಹುಟ್ಟಿಸಿ ನಂತರ ವಚನಭ್ರಷ್ಟ ಎನ್ನಿಸಿಕೊಳ್ಳುವ ಸನ್ನಿವೇಶವೂ ಬರುತ್ತಿರಲಿಲ್ಲ.

ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಕೆಡುವುವಲ್ಲಿ ಮುಖ್ಯ ಪಾತ್ರ ವಹಿಸಿದ್ದ ಹುಣುಸೂರು ವಿಶ್ವನಾಥ್ ಯಡಿಯೂರಪ್ಪನವರ ಸಚಿವರ ಆಯ್ಕೆಯ ಬಗ್ಗೆ ಸಾಕಷ್ಟು ಆಕ್ರೋಶದಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ:

Leave a Reply