KSRTC ನೌಕರರಿಗೆ ಈ ಬಾರಿ ಬರೀ ಬೇವು;ಸಂಕ್ರಾಂತ್ರಿ ಬಂದರೂ ಸಂಬಳ ಇಲ್ಲ!

ಕಳೆದ ತಿಂಗಳಷ್ಟೇ KSRTC ನೌಕರರು ಸರ್ಕಾರಕ್ಕೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ತವ್ಯ ಬಹಿಷ್ಕರಿಸಿ ದಿನಗಟ್ಟಲೇ ಮುಷ್ಕರ ಮಾಡಿ ಎಚ್ಚರಿಸಿದ್ದರೂ ಸಹ ಮತ್ತೆ ರಾಜ್ಯ ಬಿಜೆಪಿ ಸರ್ಕಾರ KSRTC ನೌಕರ ಕುರಿತು ಅಲಕ್ಷ್ಯತೆ ತೋರಿ ಬಂಡತನ ಪ್ರದರ್ಶಿಸಿದೆ.

೫೦೦ ಕೋಟಿ ವೆಚ್ಚದಲ್ಲಿ ಹೊಸದಾಗಿ ಅನುಭವ ಮಂಟಪ ಕಟ್ಟಿಸುವುದಕ್ಕೆ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರ ತೋರುತ್ತಿರುವ ಮುತುವರ್ಜಿ ಹಾಗು ಅವಸರ KSRTC ನೌಕರರಿಗೆ ಸಂಬಳ ಕೊಡಿಸಲು ತೋರಬೇಕಿತ್ತು. ಒಂದು ವೇಳೆ ಬಸವಣ್ಣನವರು ನಮ್ಮೊಂದಿಗೆ ಇಂದು ಇದ್ದಿದ್ದರೂ ಸಹ ನನಗೆ ಅನುಭವ ಮಂಟಪ ಕಟ್ಟಿಸಿ ಎಂದು ಹೇಳುವ ಬದಲು ಆ ನೌಕರರಿಗೆ ಮೊದಲು ಸಂಬಳ ಪಾವತಿಗೊಳ್ಳುವಂತೆ ನೋಡಿಕೊಳ್ಳಿರಿ ಎಂದು ಹೇಳುತ್ತಿದ್ದರು ಎಂಬುದು ನಿಸ್ಸಂದೇಹವಾದದ್ದು.

ಹೀಗಾಗಿ ವೇತನವಿಲ್ಲದೆ ಪರದಾಡುತ್ತಿರುವ ನೌಕರರು ಮತ್ತು ಕುಟುಂಬದವರು ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಿಸಲಾಗದೆ ಸಮಸ್ಯೆ ಪಡುವಂತಾಗಿದೆ. ರಾಜ್ಯದ ಜನರ ಆರೈಕೆ ಮಾಡುವ ಬದಲು ಓಲೈಕೆ ರಾಜಕೀಯ ಮಾಡುವಲ್ಲಿ ನಿರತವಾಗಿರುವ ಸರ್ಕಾರವನ್ನು ಹೊಂದಿರುವ ನಾವೇ ದೌರ್ಭಾಗ್ಯವಂತರು!

Leave a Reply