ಕುಮಾರಣ್ಣ ನಮ್ಮ ಜೀವನಕ್ಕೆ ದಾರಿ ದೀಪ : ಕೃತಜ್ಞತೆ ಸಲ್ಲಿಸಿದ ವಿಕಲಚೇತನರು

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಹೃದಯ ಸಿರಿವಂತಿಕೆಗೆ ಪ್ರಸ್ತಾವನೆ ಅನಗತ್ಯ. ಕುಮಾರಸ್ವಾಮಿ ಬಾಯಿ ತಪ್ಪಿ ಏನಾದರು ಅಂದರು ಅದನ್ನು ದಿನಗಟ್ಟಲೇ ಎಕ್ಸ್ಕ್ಲ್ಯೂಸಿವ್ ಸುದ್ದಿಯಾಗಿ ಪ್ರಸಾರ ಮಾಡುವ ಟಿವಿ ಮಾಧ್ಯಮಗಳು, ಅದೇ ಅವರು ಮಾರಕ ಖಾಯಿಲೆಯಿಂದ ಬಳಲುತ್ತಿರುವ ಹಸುಗೂಸಿನ ಚಿಕಿತ್ಸಾ ವೆಚ್ಚದ ಭಾರ ಹೊತ್ತಾಗ, ಅಥವಾ ಬೇಜವಾಬ್ದಾರಿ ಗಂಡನ ಬಗ್ಗೆ ಮಕ್ಕಳ ಶಾಲೆ ಶುಲ್ಕ ಕಟ್ಟಲು ಹಣವಿಲ್ಲದ ಮಹಿಳೆ ಬಂದು ತನ್ನ ಅಳಲು ತೋಡಿಕೊಂಡಾಗ, ಶುಲ್ಕ ಕಟ್ಟಲು ಹಣ ನೀಡಿ ಹಾಗು ಆಕೆಯ ಗಂಡನಿಗೆ ತಿಳಿ ಹೇಳಿ ಆಟೋ ಕೊಡಿಸಿ ಜೀವನೋಪಾಯಕ್ಕೆ ದಾರಿ ಮಾಡಿಕೊಡುವ ಅಥವಾ ದಿನನಿತ್ಯ ಹಲವು ಬಗೆಯ ಸಮಸ್ಯೆಗಳನ್ನು ಹೊತ್ತು ಬರುವ ಜನರ ಕಷ್ಟ ಆಲಿಸುವ ರೀತಿಯ ಬಗ್ಗೆ ತುಟಿ ಬಿಚ್ಚುವುದಿಲ್ಲ. ಹಾಗಾಗಿ ಇದು ಕುಮಾರಸ್ವಾಮಿ ಅವರ ಬಗೆಗಿನ ಬ್ರೇಕಿಂಗ್ ನ್ಯೂಸ್ ಅಲ್ಲದಿದ್ದರೂ, ಬ್ರೇಕ್ ಮಾಡಲೇ ಬೇಕಾದ ನ್ಯೂಸ್ ಅಂತೂ ಹೌದು.

ಸಂಕ್ರಾಂತಿಯ ದಿನದಂದು ಕುಮಾರಸ್ವಾಮಿ ತಮ್ಮ ಹಿತೈಷಿಗಳಿಗೆ ಹಬ್ಬದ ಶುಭಾಷೆಯಗಳನ್ನು ತಿಳಿಸುವಾಗ ವಿಕಲಚೇತನರ ದಂಡೊಂದು ಜೆಪಿ ನಗರದ ಅವರ ನಿವಾಸದ ಎದುರು ಬಂದು ನಾವು ಕುಮಾರಣ್ಣನಿಗೆ ಧನ್ಯವಾದಗಳನ್ನು ಅರ್ಪಿಸಬೇಕು, ದಯವಿಟ್ಟು ಭೇಟಿ ಮಾಡಲು ಅವಕಾಶ ಕಲ್ಪಿಸಿಕೊಡಿ ಎಂದು ಸಂಬಂಧ ಪಟ್ಟ ವ್ಯಕ್ತಿಯೊಡನೆ ವಿನಂತಿಸಿಕೊಂಡರು. ಕೆಲವೇ ನಿಮಿಷಗಳಲ್ಲಿ ಅವರೆಲ್ಲರೂ ಎಳ್ಳು ಬೆಲ್ಲದ ಡಬ್ಬ, ಹೂ ಗುಚ್ಚು, ಡಿಜಿಟಲ್ ಚಿತ್ರಪಟವನ್ನು ಹಿಡಿದು ಕುಮಾರಸ್ವಾಮಿ ಅವರ ನಿವಾಸದೊಳಗೆ ಆಸೀನರಾಗಿದ್ದರು. ಕುಮಾರಸ್ವಾಮಿ ದಂಪತಿಗಳು ಆಗಮಿಸುತ್ತಿದ್ದಂತೆ ಅವರಿಗೆ ತಮ್ಮ ಕೃತಜ್ಞತೆ ಸಲ್ಲಿಸಿದರು. ಅಷ್ಟಕ್ಕೂ ಕುಮಾರಸ್ವಾಮಿ ಅವರು ಮಾಡಿದ್ದಾದರೂ ಏನು? ಮುಂದೆ ಓದಿ…

ಕುಮಾರಸ್ವಾಮಿ ಅವರು ತಮ್ಮ ಅಧಿಕಾರಾವಧಿಯಲ್ಲಿ 600ಕ್ಕೂ ಹೆಚ್ಚು ವಿಕಲ ಚೇತನರಿಗೆ ಇಂಧನ ಇಲಾಖೆಯಲ್ಲಿ ಖಾಯಂ ಉದ್ಯೋಗ ಕೊಡಿಸಿ, ದಿಕ್ಕಾಪಾಲಾಗಿದ್ದ ಅವರ ಜೀವನಕ್ಕೆ ದಾರಿ ದೀಪವಾಗಿದ್ದಾರೆ. ಇದರ ಹಿನ್ನಲೆಯಲ್ಲಿ ಅವರ ಪೈಕಿ 30 ಜನರು ಬಂದು ಅವರಿಗೆ ವಂದನಾರ್ಪಣೆ ಸಲ್ಲಿಸಿ ಹಬ್ಬದ ಶುಭಾಶಯಗಳನ್ನು ಕೋರಿದರು.

Leave a Reply