ಸಂಪುಟ ವಿಸ್ತರಣೆಯ ಬೆನ್ನಲ್ಲೇ ಅಸಮಧಾನದ ಅಲೆಗೆ ತತ್ತರಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರ!

ರಾಜ್ಯ ರಾಜಕೀಯದಲ್ಲಿ ಬಾರಿ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಸಂಪುಟ ವಿಸ್ತರಣೆಗೆ ಕೊನೆಗೂ ತೆರೆ ಬಿದ್ದಿದ್ದೆ. ಹಲವು ತಿಂಗಳುಗಳಿಂದ ಬಿಜೆಪಿ ವಲಯದಲ್ಲೇ ಈ ಬಗ್ಗೆ ಸಾಕಷ್ಟು ಗಲಭೆ ಸೃಷ್ಟಿಯಾಗಿದ್ದು ಯಡಿಯೂರಪ್ಪನವರ ಮೇಲೆ ಸಾಕಷ್ಟು ಒತ್ತಡ ಹೇರಲಾಗುತಿತ್ತು. ಆದರೆ ಯಡಿಯೂರಪ್ಪ ಹಾಗೋ ಹೀಗೋ ಸಚಿವ ಸಂಪುಟ ವಿಸ್ತರಣೆ ಮಾಡಿದ ನಂತರವೂ ಸಹ ಈ ಗಲಭೆಯಿಂದ ಕೈ ತೊಳೆದುಕೊಂಡು ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ. ಏಕೆಂದರೆ ನೆನಪಿರಲಿ ಇದು ಬಹುಮತ ಗಳಿಸಿ ಸ್ಥಾಪಿಸಿರುವ ಸರ್ಕಾರವಲ್ಲ, ಹೊರತಾಗಿ 17 ಜನ ಶಾಸಕರ ಕರುಣೆಯ ಫಲವಾಗಿ ಸ್ಥಾಪಿಸಿರುವ ಸರ್ಕಾರ. ಆದ್ದರಿಂದ ಅದು ಅಸಂಭವ!

ಒಂದು ವೇಳೆ ಯಡಿಯೂರಪ್ಪ ರಾಜ್ಯದ ಜನರ ವಿಶ್ವಾಸ ಗಳಿಸಿ ಬಹುಮತ ಪಡೆದುಕೊಂಡಿದ್ದರೂ ಸಹ ಕೇಂದ್ರ ಬಿಜೆಪಿ ಆಯೋಗ ಯಡಿಯೂರಪ್ಪನವರಿಗೆ ಬೇಕಾದ್ದವರನ್ನು ಮಂತ್ರಿ ಮಾಡಲು ಅಭಿವ್ಯಕ್ತ ಸ್ವತಂತ್ರವೇನೂ ನೀಡುತ್ತಿರಲಿಲ್ಲ. ಆದರೆ ಕನಿಷ್ಠ ಪಕ್ಷ ಅವರು ಕೆಲವರ ಋಣದ ಭಾರ ಹೊರುತ್ತಲೇ ತಮ್ಮ ಅಧಿಕಾರಾವಧಿ ಕಳೆಯುವಂತ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತಿರಲಿಲ್ಲ. ಮುಖ್ಯಮಂತ್ರಿ ಪಟ್ಟ ಕಬಳಿಸುವ ಹುರುಪಿನಲ್ಲಿ ಸಚಿವರಿಗೆ ಮಂತ್ರಿಗಿರಿಯ ನಿರೀಕ್ಷೆ ಹುಟ್ಟಿಸಿ ನಂತರ ವಚನಭ್ರಷ್ಟ ಎನ್ನಿಸಿಕೊಳ್ಳುವ ಸನ್ನಿವೇಶವೂ ಬರುತ್ತಿರಲಿಲ್ಲ.

ಆದರೆ ಈಗ ಸಿಪಿ ಯೋಗೇಶ್ವರ್ ನನ್ನ ಮಂತ್ರಿ ಮಾಡಿರುವುದಕ್ಕೆ ಬಿಜೆಪಿ ವಲಯದಲ್ಲಿ ಸಾಕಷ್ಟು ಅಸಮಾಧಾನ ವ್ಯಕ್ತವಾಗುತ್ತಿದೆ. ಸಚಿವ ಸ್ಥಾನ ಕೈ ತಪ್ಪಿ ಹೋದ ಹಲವು ಶಾಸಕರು ಸಿಪಿ ಯೋಗೇಶ್ವರ್ ನಂತ ಭ್ರಷ್ಟನಿಗೆ ಅವಕಾಶ ನೀಡಿರುವುದಕ್ಕೆ ಬಹಿರಂಗವಾಗಿ ಕಿಡಿ ಕಾರುತ್ತಿದ್ದರೆ. ಅಷ್ಟೇ ಯಾಕೆ ಕೆಲವರು ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ದಾಖಲೆಗಳನ್ನು ಹೊಂದಿರುವ ಸಿಡಿ ಗಳನ್ನು ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದೆ ಪಕ್ಷದ ನಾಯಕರೇ ಅಲ್ಲವೇ ತಮ್ಮ ಪಕ್ಷ ಶಿಸ್ತಿನ ಪಕ್ಷ ಎಂದು ಹಿಗ್ಗುವುದು?

Leave a Reply