ನಮ್ಮ ನೆಲ ಕಬಳಿಸಲು ಮಹಾ ಸಂಚು! ಬಾಲ ಮುದುರಿಕೊಂಡು ಕುಳಿತ್ತಿರುವ ರಾಜ್ಯ ಸರ್ಕಾರ

ಮಹಾರಾಷ್ಟ್ರ ಮುಖ್ಯಮಂತ್ರಿ ಬಹಿರಂಗವಾಗಿ ಕರ್ನಾಟಕದ ಭೂ ಭಾಗವನ್ನು ತಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳಲು ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಸಾಮಾಜಿಕ ಜಾಲತಾಣ ಟ್ವಿಟರ್ ನ ಮೂಲಕ ಬಹಿರಂಗವಾಗಿ ಹೇಳಿಕೆಗಳನ್ನು ನೀಡಿದ್ದಾರೆ. ಉದ್ಧವ್ ಠಾಕ್ರೆ ಈ ರೀತಿ ಕರ್ನಾಟಕದ ಬಗ್ಗೆ ಉದ್ದಟ್ಟತನ ಪ್ರದರ್ಶಿಸಿರುವುದು ಇದೇನು ಮೊದಲಲ್ಲ. ಈ ಹಿಂದೆಯೂ ಕೂಡ ಉತ್ತರ ಕರ್ನಾಟಕದ ಕೆಲವು ಭೂ ಭಾಗಗಳು ತಮ್ಮ ರಾಜ್ಯಕ್ಕೆ ಸೇರಬೇಕು ಎಂದು ಹೇಳಿದ್ದರು. ಆಗಲು ಸಹ ಈಗಿನಂತೆಯೇ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಕರ್ನಾಟಕ ರಾಜ್ಯ ಬಿಜೆಪಿ ಸರ್ಕಾರವು ತುಟಿಕ್ ಪಿಟಿಕ್ ಎನ್ನದೆ ಬಾಲ ಮುದುರಿಕೊಂಡು ಕುಳಿತಿತ್ತು. ಇದನ್ನು ಗಮನಿಸಿದರೆ ನಮಗೆ ಕಾಡುವ ಪ್ರಶ್ನೆ ಒಂದೇ – ರಾಜ್ಯ ಬಿಜೆಪಿ ಕಳ್ಳರು ಏನಾದರು ಮಹಾರಾಷ್ಟ್ರ ಗೂಂಡಾ ಸರ್ಕಾರದೊಂದಿಗೆ ಶಾಮೀಲು ಆಗಿದ್ದೀಯಾ ಎಂಬುದು!

ಹೌದು, ಕೇಂದ್ರ ನಾಯಕರ ಕೈ ಗೊಂಬೆಯಂತೆ ಕಾರ್ಯ ನಿರ್ವಹಿಸುವ ಕರ್ನಾಟಕ ಬಿಜೆಪಿ ಸರ್ಕಾರವು ಈ ಮಟ್ಟಿಗೆ ಇಳಿದರು ಅದು ಆಶ್ಚರ್ಯಕರ ಸಂಗತಿಯೇನಲ್ಲ. ಕೆಲವೇ ದಿನಗಳ ಹಿಂದೆಯಷ್ಟೇ ಮರಾಠಿ ಅಭಿವೃದ್ಧಿ ಪ್ರಾಧಿಕಾರವನ್ನು ಈ ಸರ್ಕಾರ ಸ್ಥಾಪಿಸಿರುವುದನ್ನು ನಾವು ಮರಿಯುವ ಹಾಗೆ ಇಲ್ಲ.

ಅಲ್ಲದೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ದಕ್ಷಿಣ ಭಾರತದ ರಾಜ್ಯವೊಂದಾದ ಕರ್ನಾಟಕಕ್ಕಿಂತಲೂ ಮರಾಠಿ ಹಾಗು ಹಿಂದಿ ಭಾಷಿಗರ ರಾಜ್ಯವಾದ ಮಹಾರಾಷ್ಟ್ರದಲ್ಲಿ ತನ್ನ ಅಧಿಪತ್ಯ ಸಾಧಿಸಲು ಹಾಗು ಕಾಪಾಡಿಕೊಳ್ಳಲು ಹೆಚ್ಚು ಆಸಕ್ತಿ ಹೊಂದಿದೆ. ಒಂದು ವೇಳೆ ಕರ್ನಾಟಕದ ಕೈಲಾಗದ ನಾಯಕರಿಗೆ ಬೆದರಿಸಿ ಕರ್ನಾಟಕದ ಭೂ ಭಾಗವನ್ನು ಮಹಾರಾಷ್ಟ್ರ ಸರ್ಕಾರಕ್ಕೆ ಮಾರಾಟ ಮಾಡಿಸಿದರು ಆಶ್ಚರ್ಯವಿಲ್ಲ! ಎಷ್ಟೇ ಆದರೂ ಹಣ ಹಾಗು ಅಧಿಕಾರದ ಆಮಿಶಕ್ಕೆ ಒಳಗಾಗಿ ಪಕ್ಷ ಸೇರಿರುವ ಶಾಸಕರ ಬೆಂಬಲದ ಮೇಲೆ ರಚನೆಯಾದ ಸರ್ಕಾರವಲ್ಲವೇ!

ಆದ್ದರಿಂದ ನಾವು ಈಗ ಎಚ್ಚೆತ್ತುಕೊಳ್ಳುವುದು ಅನಿವಾರ್ಯ. ಇತರೆ ದಕ್ಷಿಣ ಭಾರತ ರಾಜ್ಯಗಳಂತೆ ನಾವು ಸಹ ನಮ್ಮ ಭಾಷೆ, ನಮ್ಮ ಸಂಸ್ಕೃತಿ, ನಮ್ಮ ನೆಲ, ನಮ್ಮ ಜಲದ ಮೇಲೆ ಗೌರವ ಹಾಗು ಪ್ರೀತಿವುಳ್ಳ, ಅದನ್ನು ಕಾಪಾಡಲು ಹೋರಾಟ ಮಾಡಲು ಸಿದ್ಧವಿರುವಂತಹ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸುವ ಮೂಲಕ ಅಧಕ್ಕೆ ಶಕ್ತಿ ತುಂಬಾ ಬೇಕು. ಪ್ರಾದೇಶಿಕ ಪಕ್ಷಕ್ಕೆ ಶಕ್ತಿ ತುಂಬುವ ಮೂಲಕ ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ನಮ್ಮ ಧ್ವನಿ ದೇಶಾದ್ಯಂತ ಕೇಳಲು ಸಾಧ್ಯ!

Leave a Reply