ಬೆಳಗಾವಿಯಲ್ಲಿ ಕನ್ನಡ ಧ್ವಜ ತೆರವು ಮಾಡಬೇಕು ಎಂದಾಗಲೇ ಇವರಿಗೆ ಪೆಟ್ಟು ಕೊಡಬೇಕಿತ್ತು – ಹೆಚ್.ಡಿ.ಕೆ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕರ್ನಾಟಕ ರಾಜ್ಯದ ಬೆಳಗಾವಿಯ ಕೆಲ ಭಾಗಗಳು ಮಹಾರಾಷ್ಟ್ರಕ್ಕೆ ಸೇರಬೇಕು ಹಾಗು ಸೇರಿಸಲು ಕ್ರಮ ಕೈಗೊಳ್ಳುವುದಾಗಿ ಟ್ವೀಟ್ ಮಾಡಿದ್ದಾರೆ. ನೆರೆ ರಾಜ್ಯದ ಸರ್ಕಾರ ನಮ್ಮ ಭೂಮಿ ಕಬಳಿಸುವುದಾಗಿ ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಕರ್ನಾಟಕದ ಬಿಜೆಪಿ ಸರ್ಕಾರ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ. ಅಲ್ಲದೆ ಬಿಜೆಪಿಯ ಯಾವುದೇ ನಾಯಕರು ಸಹ ಠಾಕ್ರೆ ಅವರ ಹೇಳಿಕೆಯ ವಿರುದ್ಧ ಧ್ವನಿ ಎತ್ತಿಲ್ಲ. ಇದು ಅವರ ಕನ್ನಡ ಪ್ರೇಮ ತೋರುತ್ತದೆ. ಅಷ್ಟೇ ಅಲ್ಲ ಇಂತಹ ಸನ್ನಿವೇಶಗಳು ನದಿಗೆ ಒಂದು ಪ್ರಬಲ ಪ್ರಾದೇಶಿಕ ಪಕ್ಷದ ಅವಶ್ಯಕತೆಯನ್ನು ತೋರುತ್ತದೆ.

ಠಾಕ್ರೆ ಘೋಷಣೆಯ ವಿರುದ್ಧ ಈವರೆಗೂ ಧ್ವನಿಯೆತ್ತಿರುವ ನಾಯಕ ಹೆಚ್.ಡಿ ಕುಮಾರಸ್ವಾಮಿ ಅವರು ಮಾತ್ರ. ಪ್ರತಿ ಬಾರಿಯ ಕನ್ನಡ ಭಾಷೆಗೆ ಅಗೌರವಿತವಾದ ಅಥವಾ ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ಬರುವಂತಹ ಯಾವುದೇ ಘಟನೆ ನೆಡೆದಾಗಲೂ, ಅದರ ವಿರುದ್ಧ ಹೃದಯಪೂರಕವಾಗಿ ಧ್ವನಿ ಎತ್ತುವುದು ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಒಬ್ಬರೇ. ಉಳಿದ ಪಕ್ಷದ ನಾಯಕರು ಮತಕ್ಕಾಗಿ ತಮ್ಮ ಜಾತಿ ಅಥವಾ ಧಾರ್ಮಗಳಿಗಾಗಿ ಬೀದಿಗಿಳಿದು ಹೋರಾಟ ಮಾಡಿದ್ದಾರೆಯೇ ಹೊರೆತು ದೇವೇಗೌಡರಂತೆ ಕಾವೇರಿ ಪ್ರಕರಣದ ಕುರಿತು ೮೦ರ ಹರಿಯದಲ್ಲೂ ಉಪವಾಸ ಸತ್ಯಾಗ್ರಹ ಮಾಡಿರುವ ಚರಿತ್ರೆಯೇ ಇಲ್ಲ. ಅದೇ ರೀತಿ ಈ ಬಾರಿಯೂ ಕುಮಾರಸ್ವಾಮಿ ನೆರೆ ರಾಜ್ಯ ಸರ್ಕಾರಕ್ಕೆ ಖಡಕ್ ಪ್ರತ್ಯುತ್ತರ ನೀಡಿದ್ದಾರೆ.

ಈ ಕುರಿತು ಕುಮಾರಸ್ವಾಮಿ ಅವರು ಮಾಡಿರುವ ಟ್ವೀಟ್ ಗಳು ಹೀಗಿದೆ:

Leave a Reply