ಕನಿಷ್ಠ ಸೌಜನ್ಯವಿಲ್ಲದ ಅನಾಗರಿಕ ಸರ್ಕಾರ ಇದು – ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಹೆಚ್.ಡಿ.ಕೆ

ಶರವೇಗದಲ್ಲಿ ಪ್ರಾರಂಭವಾಗಿರುವ ಜೆಡಿಎಸ್ ಪಕ್ಷದ ಪುನಶ್ಚೇತನಕ್ಕೆ ತೆಗೆದುಕೊಳ್ಳುತ್ತಿರುವ ಕ್ರಮಗಳ ಹಿನ್ನಲೆಯಲ್ಲಿ ನೆನ್ನೆಯ ದಿನ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆದ ಜೆಡಿಎಸ್ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯದ ವಿವಿಧ ಭಾಗಗಳ ಉಸ್ತುವಾರಿಯನ್ನು ಪಕ್ಷದ ನಾಯಕರಿಗೆ ಹಂಚಿಕೆ ಮಾಡಲಾಯಿತು. ನಂತರ ಮಾಧ್ಯಮಘೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ತಮ್ಮ ಮುಂದಿನ ನಡೆಗಳ ಬಗ್ಗೆ ಹಾಗು ರಾಜ್ಯ ಸರ್ಕಾರದ ದುರಾಡಳಿತವನ್ನು ಕಟುವಾಗಿ ಟೀಕಿಸಿದರು.

ಇತ್ತೀಚೆಗಷ್ಟೇ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳು ತಾವೇ ಮೇಲುಗೈ ಸಾಧಿಸಿರುವುದಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರ ಕುರಿತು ಮಾತನಾಡಿದ ಕುಮಾರಸ್ವಾಮಿ ‘ಅವರ ಬಂಡವಾಳ ಏನು ಎಂಬುದು ನಮಗೆ ಗೊತ್ತಿದೆ. ಅವರು ಹೇಳಿದಷ್ಟು ಸೀಟುಗಳು ಎಲ್ಲಿ ಗೆದ್ದಿದ್ದಾರೆ ಎಂಬುದನ್ನು ದುರ್ಬಿನ್ ಹಾಕಿ ಹುಡುಕಬೇಕಾಗಿದೆ. ಎಲ್ಲಾ ಪಕ್ಷಗಳ ಶಕ್ತಿಯ ವಾಸ್ತವಾಂಶ ಅರಿತುಕೊಂಡಿದ್ದೇನೆ’ ಎಂದು ಹೇಳಿದರು.

ನಂತರ ಗೃಹ ಸಚಿವ ಅಮಿತ್ ಶಾ ರವರು ಕರ್ನಾಟಕದಲ್ಲಿ ಮಡಿದ ಭಾಷಣದ ಬಗ್ಗೆಯೂ ಕೊಂಕಾಡಿದ ಕುಮಾರಸ್ವಾಮಿ ಅವರು ‘ ಅವರು ಹೇಳಿದಂತೆ ಕರ್ನಾಟಕದ ಅಭಿವೃದ್ಧಿಗೆ ನಿಂತಿರುವ ಆ ಡಬಲ್ ಇಂಜಿನ್ ನಿಂದಲೇ ಈ ರಾಜ್ಯಕ್ಕೆ ಪರಿಸ್ಥಿತಿ ಬಂದೊದಗಿದೆ. ನೆರೆ ಸಂತ್ರಸ್ತರಿಗೆ ಇನ್ನು ಪರಿಹಾರ ಒದಗಿಸಿಲ್ಲ. ಕೊರೋನಾ ಹೆಸರಿನಲ್ಲಿ ಯಾವ ರೀತಿ ಲೂಟಿ ಮಾಡಿದ್ದಾರೆ ಎಂಬುದು ನಿಮಗೇ ಗೊತ್ತಿದೆ. ಆದ್ದರಿಂದ ಇವರೇನು ಮುಂದಿನ ಚುನಾವಣೆಯಲ್ಲಿ ೧೫೦ ಸೀಟ್ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ, ಉಪಚುನಾವಣೆಗಳು ನಡೆಯುವ ರೀತಿಯೇ ಬೇರೆ. ಯಡಿಯೂರಪ್ಪ ೨೦೦೮ ರಲ್ಲಿ ಆಪರೇಷನ್ ಕಮಲಾ ಹೆಸರಿನಲ್ಲಿ ಬಹಳಷ್ಟು ಚುನಾವಣೆಗಳನ್ನು ಗೆದ್ದರು, ನಂತರ ಏನಾಯಿತು? ಈಗಲೂ ಅವರ ಹಣೆಬರಹ ಅಷ್ಟೇ. ಅವರು ಒಳ್ಳೆ ಕೆಲಸ ಮಾಡಿದ್ದಾರೆ ನಮಗೆ ಆತಂಕ ಇರುತ್ತಿತ್ತು. ಆದ್ದರಿಂದ ನಾವೇನು ದೊಡ್ಡ ಮಟ್ಟದ ಅಪವಾಧ ಮಾಡುವ ಅವಶ್ಯಕತೆ ಇಲ್ಲ , ಅವರ ಸ್ವಯಂಕೃತ ಅಪರಾಧಗಳಿಂದ ಅವರ ಸುಯಿಸೈಡ್ ಆಗುವ ದಿನಗಳೇನು ದೂರವಿಲ್ಲ.’ ಎಂದು ಖಾರವಾಗಿ ನುಡಿದಿದ್ದಾರೆ.

ನಂತರ ತಮ್ಮ ಮಹತ್ವಾಕಾಂಕ್ಷೆಯ ಪಂಚರತ್ನ ಕಾರ್ಯಕ್ರಮಗಳನ್ನು ವಿವರಿಸುವಾಗ ಹಿಂದೆ ಕುಳಿತಿದ್ದ ಶರವಣ ಈಗಲೇ ಹೇಳಬೇಡಿ ಕಾಪಿ ಮಾಡುತ್ತಾರೆ ಎಂದು ಎಚ್ಚರಿಸಿದಾಗ, ಪರವಾಗಿಲ್ಲ ಕಾಪಿ ಮಾಡಲು ಅವರಿಗೆ ಸಾಧ್ಯವಿಲ್ಲ , ದುಡ್ಡು ಮಾಡಬೇಕಲ್ಲ ಅವರಿಗೆ ಇದೆಲ್ಲ ಅರ್ಥವಾಗೋದು ಇಲ್ಲ. ನಂತರ ಪ್ರಧಾನಿ ಮೋದಿಯಿಂದ ಹಿಡಿದು ಬಿಜೆಪಿ ನಾಯಕರು ಹೇಗೆ ತಮ್ಮ’ಕಾಂಪೀಟ್ ವಿಥ್ ಚೈನಾ’, ‘ಬಡವರ ಬಂಧು’ ಯೋಜನೆಗಳನ್ನು ಹೇಗೆ ಅನುಕರಣ ಮಾಡುತ್ತಿದ್ದಾರೆ ಹಾಗು ಕುಮಾರಸ್ವಾಮಿ ಅವರು ಸ್ಥಾಪಿಸಿದ ಕಾರ್ಖಾನೆಗಳ ಕ್ಲಸ್ಟರ್ ಗೆ ಹೇಗೆ ಯಡಿಯೂರಪ್ಪ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದರೆ ಎಂಬುದರ ಬಗ್ಗೆ ಪ್ರಸ್ತಾಪಿಸಿದರು.

Leave a Reply