ಮಂತ್ರಿ ಆದ ತಕ್ಷಣ ಅವರಿಗೇನು ಕೊಂಬು ಬರುತ್ತಾ? – ಸಿಪಿ ಯೋಗೇಶ್ವರ್ ಗೆ ಹೆಚ್.ಡಿ.ಕೆ ಟಾಂಗ್!

ಕೆಲವು ತಿಂಗಳಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೂ ಸಚಿವ ಸಿಪಿ ಯೋಗೇಶ್ವರ್ ಗೂ ಮಾತಿನ ಚಕಮಕಿ ನಡೆಯುತ್ತಿದೆ. ಇಂದು ತಮ್ಮ ಸ್ವಕ್ಷೇತ್ರದ ಅಭಿವೃದ್ಧಿ ಕಾಮಗಾರಿಯೊಂದಕ್ಕೆ ಗುದ್ದಲಿ ಪೂಜೆ ಮಾಡುವ ಸಲುವಾಗಿ ಕುಮಾರಸ್ವಾಮಿ ಅವರು ಚನ್ನಪಟ್ಟಣಕ್ಕೆ ತೆರಳಿದ್ದರು. ಆಗ ಮಾಧ್ಯಮದೊಂದಿಗೆ ಮಾತನಾಡಿದ ಅವರು ಜಿಟಿ ದೇವೇಗೌಡರು ತಮಗೆ ವಯ್ಯಾಸದ ಕಾರಣ ಪಕ್ಷ ಸಂಘಟನಾ ಜವಾಬ್ದಾರಿಗೆ ತಮ್ಮನ್ನು ನೇಮಕ ಮಾಡುತ್ತಿಲ್ಲ ಎಂದು ಆರೋಪಿಸಿದ್ದ ಬಗ್ಗೆ ಕೇಳಿದಾಗ ‘ ಹೊರಟ್ಟಿ ಅವರಿಗೂ ವಯಸ್ಸಾಗಿದೆ, ಆದರೆ ಅವರಿಗೆ ಜವಾಬ್ದಾರಿ ನೀಡಿಲ್ಲವೇ. ಜಿಟಿಡಿ ಅವರು ಸ್ವತಃ ತಾವೇ ತಮ್ಮ ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ನಿರತರಾಗಿರುವುದಾಗಿ ಆದ್ದ ಕಾರಣ ಪಕ್ಷ ಸಂಘಟನೆಗೆ ಸಮಯವಿಲ್ಲವೆಂದು ಹೇಳಿದ್ದರು. ನಾಮ್ಕಾವಾಸ್ತಿಗೆ ನಾವು ಸದಸ್ಯರನ್ನು ನೇಮಕ ಮಾಡಲು ಸಾಧ್ಯವೇ? ಯಾರಿಗೆ ಪಕ್ಷ ಸಂಘಟನೆ ಮಾಡುವಲ್ಲಿ ಆಸಕ್ತಿ ಹೊಂದಿದ್ದಾರೋ ಅವರನ್ನು ಮಾತ್ರ ನೇಮಕ ಮಾಡಿದ್ದೇವೆ. ಈ ರೀತಿ ಮಾಧ್ಯಮದ ಮೂಲಕ ನನಗೆ ಸಂದೇಶ ಕಳಿಹಿಸುವ ಬದಲು ನಮ್ಮ ಪಕ್ಷ ಕಚೇರಿಗೆ ಬಂದು ಮಾತನಾಡಲಿ ಅಥವಾ ದೇವೇಗೌಡರ ಮನೆಗೆ ಬಂದು ಮಾತನಾಡಲಿ’ ಎಂದು ಹೇಳಿದರು.

ನಂತರ ಕುಮಾರಸ್ವಾಮಿ ಅವರನ್ನು ಕಟ್ಟಿ ಹಾಕಲು ಏನಾದರು ಸಿಪಿ ಯೋಗೇಶ್ವರ್ ನನ್ನ ಸಚಿವರನ್ನಾಗಿ ಮಾಡಿದ್ದಾರಾ ಎಂದು ಕೇಳಿದಕ್ಕೆ “ನಾನು ಬಹಳ ಜನ ಮಂತ್ರಿಗಳನ್ನು ನೋಡಿದ್ದೇನೆ, ಮುಖ್ಯಮಂತ್ರಿಗಳನ್ನು ನೋಡಿದ್ದೇನೆ. ಜನ ನಮಗೆ ದೆಹಲಿಯನ್ನೂ ತೋರಿಸಿದ್ದಾರೆ. ನಮಗೇನು ಇದು ಹೊಸದಲ್ಲ. ಚಿಕ್ಕ ವಯಸ್ಸಿನಿಂದ, ರಾಜಕೀಯಕ್ಕೆ ಬರುವ ಮುನ್ನವೂ ಮಂತ್ರಿಗಳನ್ನ ನೋಡಿದ್ದೇನೆ . ಮಂತ್ರಿ ಆದ ತಕ್ಷಣ ಏನು ಕೊಂಬು ಇರುತ್ತದೆಯೇ? ನಾನು ಮುಖ್ಯಮಂತ್ರಿ ಆಗಿದ್ದ, ನನಗೇನು ಕೊಂಬು ಇದೆಯಾ? ಅಧಿಕಾರ ಬಂದಾಗ ಬಡವರ ಬಗ್ಗೆ ಚಿಂತನೆ ಮಾಡಬೇಕು. ಹಣ ಸಂಪಾದನೆ ಮಾಡಲು ಸಾಕಷ್ಟು ಮಾರ್ಗಗಳಿವೆ. ಬಡವರ ಹೊಟ್ಟೆಯ ಮೇಲೆ ಹೊಡೆದು ಮಾಡುವ ಅವಶ್ಯಕತೆ ಇಲ್ಲ. ಅವರು ಬಂದು ಇಲ್ಲೇ ಜಾಂಡಾ ಊರಲ್ಲಿ, ನನ್ನ ಜನ ನನಗೆ ಅವರ ಜನ ಅವರಿಗೆ. ಅದರಿಂದ ನಂಗೇನು ಆತಂಕ ಇಲ್ಲ” ಎಂದು ಹೇಳಿದರು.

Leave a Reply