ಬೆಳಗಾವಿಯಲ್ಲಿ ಕನ್ನಡ ಧ್ವಜ ಹಾರಿಸೋದನ್ನು ವಿರೋಧಿಸುವವರನ್ನು ಗಡಿ ಪಾರು ಮಾಡಬೇಕು! – ಹೆಚ್.ಡಿ.ಕೆ

ಬೆಳಗಾವಿ ನಗರಪಾಲಿಕೆ ಮುಂಭಾಗ ಕನ್ನಡ ಧ್ವಜಾರೋಹಣ ಮಾಡಿರುವುದನ್ನು ವಿರೋಧಿಸಿ ಮಹಾರಾಷ್ಟ್ರ ರಾಜ್ಯದ ಶಿವಸೇನಾ ಹಾಗು ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡರು ನೆನ್ನೆಯ ದಿನ ಪ್ರತಿಭಟನೆ ನೆಡೆಸಿದರು. ಇದರ ವಿರುದ್ಧ ಸ್ಥಳೀಯ ಬಿಜೆಪಿ ಶಾಸಕರು ಕಠಿಣವಿರಲಿ ಯಾವುದೇ ರೀತಿಯ ಕ್ರಮ ಇನ್ನೂ ಕೈಗೊಂಡಿಲ್ಲ. ಇದು ಓಲೈಕೆ ರಾಜಕೀಯದ ಪರಮಾವದಿ ಎಂದೇ ಹೇಳಬಹುದು.

ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಕನ್ನಡ ವಿರೋಧಿ ಚಟುವಟಿಕೆ ಕ್ರಮಗಳನ್ನು ಖಂಡಿಸಿ ಕ್ರಮಗೈಗೊಳ್ಳದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ನಾಡದ್ರೋಹಿಗಳು. ಮಹಾರಾಷ್ಟ್ರ ರಾಜ್ಯದ ಈ ಉದ್ದಟತನದ ವಿರುದ್ಧ ಪ್ರಾದೇಶಿಕ ಪಕ್ಷ ಜೆಡಿಎಸ್ ನ ನಾವಿಕ ಹೆಚ್.ಡಿ ಕುಮಾರಸ್ವಾಮಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಕುಮಾರಸ್ವಾಮಿ ಅವರ ನಾಡಪ್ರೇಮ ಕೇವಲ ಸಾಮಾಜಿಕ ಜಾಲತಾಣಕ್ಕೆ ಸೀಮಿತವಾಗಿಲ್ಲ. ಹೊರೆತಾಗಿ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ಪ್ರತಿಭಟನಾಕಾರರನ್ನು ಗಡಿ ಪಾರು ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ.

Leave a Reply