ಯುವರಾಜನಿಗೆ ಶುಭಕೋರಲು ಮುಗಿಬಿದ್ದ ಅಭಿಮಾನಿಗಳು! ಜಾಗ್ವಾರ್ ನ ಅದ್ದೂರಿ ಹುಟ್ಟುಹಬ್ಬ ಸಂಭ್ರಮಾಚರಣೆಯ ತುಣುಕು.

ಜಾಗ್ವಾರ್, ಸೀತಾರಾಮ ಕಲ್ಯಾಣ ಹಾಗು ಕುರುಕ್ಷೇತ್ರ ಹೀಗೆ ಚಿತ್ರದಿಂದ ಚಿತ್ರಕ್ಕೆ ತಮ್ಮ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡು ಬರುತ್ತಿರುವ ನಿಖಿಲ್ ಕುಮಾರ್ ಅವರು ಇಂದು ತಮ್ಮ 32ನೇ ವರ್ಷಕ್ಕೆ ಸಾಕಷ್ಟು ಹುರುಪಿನೊಂದಿಗೆ ಕಾಲಿಡುತ್ತಿದ್ದಾರೆ. ಅದರ ಪ್ರಯುಕ್ತವಾಗಿ ತಂದೆ- ತಾಯಿರಾದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹಾಗು ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಂದ ಆಶೀರ್ವಾದ ಪಡೆದರು. ನಂತರ ಕುಮಾರಸ್ವಾಮಿ ದಂಪತಿಗಳು ಮಗನ ಹುಟ್ಟುಹಬ್ಬವನ್ನು ಕೇಕ್ ಕತ್ತಿರಿಸುವ ಮೂಲಕ ಆಚಿರಿಸಿದರು.

ಪ್ರತಿ ವರ್ಷವೂ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಆಚರಿಸಲು ನೂರಾರು ಅಭಿಮಾನಿಗಳು ಜೆಪಿ ನಗರದ ಅವರ ನಿವಾಸಕ್ಕೆ ಬರುತ್ತಾರೆ. ಆದರೆ ಈ ಬಾರಿ ನಿಖಿಲ್ ಅವರ ಹುಟ್ಟುಹಬ್ಬವನ್ನು ಮತ್ತಷ್ಟು ವಿಷಯಗಳು ರಂಗೇರಿಸಿದೆ. ಹಾಗಾದರೆ ಅಭಿಮನ್ಯುವಿನ ಹುಟ್ಟುಹಬ್ಬ ಸಂಭ್ರಮಾಚರಣೆಯಲ್ಲಿ ಈ ಬಾರಿ ಇರುವ ಹೊಸತನಗಳೇನು?

ಪ್ರತಿ ಬಾರಿ ಅಭಿಮಾನಿಗಳು ನಿಖಿಲ್ ರನ್ನು ಅವರ ಹುಟ್ಟುಹಬ್ಬದಂದು ಭೇಟಿ ಮಾಡಿ ಹಿಗ್ಗುತ್ತಿದ್ದರು. ಆದರೆ ಈ ವರ್ಷ ಅಭಿಮಾನಿಗಳಿಗೆ ನಿಖಿಲ್ ದಂಪತಿಯರನ್ನು ಒಟ್ಟಿಗೆ ಕಣ್ತುಂಬಿಕೊಳ್ಳುವ ಭಾಗ್ಯ ದೊರೆತಿದೆ. ಕೇಕ್ ಕತ್ತಿರಿಸಿ ಸಂಭ್ರಮಿಸುವುದರೊಂದಿಗೆ, ಅಭಿಮಾನಿಗಳು ಈ ಬಾರಿ ರಕ್ತಧಾನ ಮಾಡಲು ನಿರ್ಧರಿಸಿದ್ದಾರೆ. ಇದರ ಸಲುವಾಗಿ ಜೆಪಿ ನಗರದ ಅವರ ನಿವಾಸದ ಹೊರಗೆ ರಕ್ತಧಾನದ ಶಿಬಿರವನ್ನು ಸ್ಥಾಪಿಸಲಾಗಿದೆ. ಅಷ್ಟೇ ಅಲ್ಲದೆ ಟೀಸರ್ ನಿಂದಲೇ ಸಾಕಷ್ಟು ಕುತೂಹಲ ಕೆರಳಿಸಿರುವ ನಿಖಿಲ್ ಅವರ ಹೊಸ ಸಿನಿಮಾ ‘ರೈಡರ್’ ನ ಟ್ರೈಲರ್ ಇಂದು ಮಧ್ಯಾಹ್ನ 12.30 ಕ್ಕೆ ಬಿಡುಗಡೆಯಾಗಲಿದೆ. ಆದ್ದರಿಂದ ಅಭಿಮಾನಿಗಳ ಸಂತಸ ಮುಗಿಲುಮುಟ್ಟಿದೆ.

Leave a Reply