ಪರಿಷತ್ ನಲ್ಲಿ ಕಾಂಗ್ರೆಸ್ ನಾಯಕ ರಾಥೋಡ್ ಸೆಕ್ಸ್ ವಿಡಿಯೋ ವೀಕ್ಷಣೆ ಹಿನ್ನಲೆಯಲ್ಲಿ ಮೊಬೈಲ್ ಬಳಕೆ ನಿಷೇಧ!

ಇಂದಿನ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹಾಗು ಗಣಿ ಮತ್ತು ಭೂವಿಜ್ಞಾನ, ಪರಿಸರ, ಜೀವಶಾಸ್ತ್ರ ಇಲಾಖೆ ಸಚಿವ ಸಿಸಿ ಪಾಟೀಲ್ ಒಂಬತ್ತು ವರ್ಷಗಳ ಹಿಂದೆ ವಿಧಾನ ಸಭೆ ಕಲಾಪದಲ್ಲಿ ಅಷ್ಲೀಲಾ ವಿಡಿಯೋ ವೀಕ್ಷಿಸಿದ್ದ ಹಿನ್ನಲೆಯಲ್ಲಿ ವಿಧಾನ ಸಭೆ ಕಲಾಪದ ವೇಳೆ ಮೊಬೈಲ್ ಬಳೆಕೆಯನ್ನು ನಿಷೇಧಿಸಲಾಗಿತ್ತು.

ಅಂದಿನ ಬಿಜೆಪಿ ಸರ್ಕಾರದ ಕಲಾಕೃತಿಗಳು ಒಂದಾ-ಎರಡಾ? ಎರಡೂವರೆ ವರ್ಷದ ಆಡಳಿತದಲ್ಲಿ ಮೂರು ಮೂರು ಮುಖ್ಯಮಂತ್ರಿಗಳ ಬದಲಾವಣೆ, ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗೆ ಹೋದ ಮುಖ್ಯಮಂತ್ರಿ, ವಿಧಾನ ಸಭೆ ಕಲಾಪದ ಸೆಕ್ಸ್ ವಿಡಿಯೋ ವೀಕ್ಷಿಸಿ ಸಿಕ್ಕಿಬಿದ್ದ ಮಂತ್ರಿಗಳು…ಅಬ್ಬಬ್ಬಾ ಆಗಷ್ಟೇ ಹುಟ್ಟಿದ ಮಗು ಕೂಡ ಅಷ್ಟು ಹೇಸಿಗೆ ಮಾಡಿಕೊಳ್ಳುವುದಿಲ್ಲ! ಅಂದಿನ ಇವರ ಸಾಹಸಮಯ ಕಾರ್ಯಗಳು ಬಿಬಿಸಿ ವಾಹಿನಿಯನ್ನೂ ಸಹ ಆಕರ್ಷಿಸಿತ್ತು.

ಅದಿರಲಿ, ಇತ್ತೀಚಿಗೆ ವಿಧಾನ ಪರಿಷತ್ ಕಲಾಪದಲ್ಲಿ ಕಾಂಗ್ರೆಸ್ ಎಂ.ಎಲ್.ಸಿ ಪ್ರಕಾಶ್ ರಾಥೋಡ್ ಅಷ್ಲೀಲಾ ವಿಡಿಯೋಗಳನ್ನು ಬ್ರೌಸ್ ಮಾಡುತ್ತಿದ್ದ ಹಿನ್ನಲೆಯಲ್ಲಿ ವಿಧಾನಪರಿಷತ್ ನಲ್ಲಿ ಮೊಬೈಲ್ ಬಳಿಕೆಯನ್ನು ನಿಷೇಧಿಸಲಾಗಿದೆ. ಪ್ರಕಟಣೆ ಮೂಲಕ ಸದನಕ್ಕೆ ಮಾಹಿತಿ ನೀಡಿದ ಪ್ರತಾಪ್ ಚಂದ್ರ ಶೆಟ್ಟಿ ೨೦೧೧ ರ ಜೂನ್ ೩ ರಲ್ಲಿ ಮೊಬೈಲ್ ಮಾಡಬಾರದು ಎಂದು ಆದೇಶವಾಗಿತ್ತು. ಆದರೆ ಸದಸ್ಯರುಗಳಿಗೆ ಪ್ರಾಯದ ಯುವಕರಂತೆ ತಮ್ಮ ಮೊಬೈಲ್ ಗಳಿಂದ ದೂರವುಳಿಯಲು ಸಾಧ್ಯವಾಗದೆ ಇರುವ ಕಾರಣ ಸದನದೊಳಗೆ ಮೊಬೈಲ್ ರಿಂಗಣಿಸುತ್ತಲೇ ಇತ್ತು. ಆದ್ದರಿಂದ ಇನ್ನು ಮುಂದೆ ಸದನದಲ್ಲಿ ಮೊಬೈಲ್ ತರುವಂತಿಲ್ಲ, ತಂದರೆ ಸೂಕ್ತ ಕ್ರಮ ಜರುಗಿಸಲಾಗುವುದು. ಮೊಬೈಲ್ ತಂದರೆ ಸ್ವಿಚ್ ಆಫ್ ಮಾಡಬೇಕು. ಮಾಹಿತಿಗಾಗಿ ಮೊಬೈಲ್ ತರುವುದಾದರೆ ಸಭಾಪತಿ ಅವರಿಂದ ಅನುಮತಿ ಪಡೆಯಬೇಕು ಎಂದು ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಈ ಹಿಂದೆ ಬಿಜೆಪಿ ಶಾಸಕರೊಬ್ಬರು ಪ್ರಿಯಾಂಕಾ ಗಾಂಧಿ ಚಿತ್ರವನ್ನು ಅಸಭ್ಯವಾಗಿ ವೀಕ್ಷಿಸುತ್ತಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ್ದ ಅಂದಿನ ವಿಧಾನಸಭೆ ಕಾಗೋಡು ತಿಮ್ಮಪ್ಪ ಅದೇ ದಿನ ವಿಧಾನಸಭೆಯಲ್ಲಿ ಮೊಬೈಲ್ ಬಳಿಕೆಯನ್ನು ನಿಷೇಧಿಸದ್ದರು.

Leave a Reply