ಹೈ ಕಮಾಂಡ್ ಗೆ ದೂರು ಸಲ್ಲಿಸಲು ಸಜ್ಜಾಗಿರುವ 15 ಮಂದಿ ಬಿಜೆಪಿ ಶಾಸಕರು! ಮುಗಿದೇ ಹೋಯ್ತಾ ಯಡ್ಡಿ ಅಧ್ಯಾಯ?

ಅನೈತಿಕ ಸಂಬಂಧಗಳ ದುಷ್ಪಲವಾಗಿ ಹುಟ್ಟಿಕೊಂಡಿರುವ ಪ್ರಸ್ತುತ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಪಾಪದ ಕೂಸೇ ಸರಿ. ಒಂದೂವರೆ ವರ್ಷಗಳು ಕಳೆದರೂ ಸರ್ಕಾರವಿನ್ನೂ ಅಭಿವೃದ್ಧಿ ಕಾರ್ಯಗಳತ್ತ ತಲೆ ಹಾಕಿ ಕೂಡಿ ಮಲಗುತ್ತಿಲ್ಲ. ಬೆಳಗಾದರೆ ಅಸಮಾಧಾನಿತ ಶಾಸಕರನ್ನು ಸಾಂತ್ವನಗೊಳಿಸುವುದೇ ಯಡಿಯೂರಪ್ಪನ್ನವರ ಮುಖ್ಯ ಗುರಿಯಾಗಿದೆ. ಆದರೆ ಯಡಿಯೂರಪ್ಪ ಸರ್ಕಾರ ನಿರ್ವಹಣೆಯಲ್ಲಿ ಎಷ್ಟರ ಮಟ್ಟಿಗೆ ವಿಫಲರಾಗಿದ್ದರೋ ತಮ್ಮ ಶಾಸಕರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಲ್ಲಿಯೂ ಅಷ್ಟೇ ವಿಫಲರಾಗಿದ್ದು, ತಾವು ರಾಜ್ಯದ ಮುಖ್ಯಮಂತ್ರಿಯಾಗಲು ಅಸಮರ್ಥರೆಂದು ಎರಡನೇ ಬಾರಿಗೆ ಸಾಬೀತು ಪಡೆಸುತ್ತಿದ್ದಾರೆ.

ಬಿಎಸ್ ವೈ ಕಾರ್ಯವೈಖರಿಯ ಬಗ್ಗೆ ರಾಜ್ಯದ ಜನತೆಗಿರುವ ಅಭಿಪ್ರಾಯವೇ ಬಿಜೆಪಿ ಶಾಸಕರದ್ದು ಕೂಡ. ಅವರ ನೀರಸ ಪ್ರದರ್ಶನಕ್ಕೆ ಬೇಸತ್ತು ಈಗ ೧೫ ಮಂದಿ ಬಿಜೆಪಿ ಶಾಸಕರು ಬಿಜೆಪಿ ಹೈ ಕಮಾಂಡ್ ಗೆ ದೂರು ನೀಡಲು ಸಜ್ಜಾಗಿದ್ದಾರೆ. ಶಾಸಕ ಸುನಿಲ್ ಕುಮಾರ್, ಸಿದ್ದು ಸವದಿ, ತಿಪ್ಪಾರೆಡ್ಡಿ, ಅಪ್ಪಚ್ಚು ರಂಜನ್, ನಾಗೇಶ್ ಸೇರಿದಂತೆ ಉತ್ತರ ಕರ್ನಾಟಕ, ಕರಾವಳಿ ಮತ್ತು ಮಧ್ಯ ಕರ್ನಾಟಕ ಭಾಗದ ೧೫ ಕ್ಕೂ ಹೆಚ್ಚು ಮಂದಿ ಸೇರಿ ಯಡಿಯೂರಪ್ಪನವರ ಈ ದುರಾಡಳಿತಕ್ಕೆ ಅಂತ್ಯ ಹಾಡುವುದರ ಬಗ್ಗೆ ಚರ್ಚೆ ನೆಡೆಸಿದ್ದಾರೆ. ಸದನದಲ್ಲಿ ನಡೆಯುತ್ತಿದ್ದ ಮುಖ್ಯಮಂತ್ರಿಯಿದ್ದರೂ, ಪ್ರತ್ಯೇಕವಾಗಿ ಈ ಶಾಸಕರ ಗುಂಪು ಭೋಜನ ಔತಣ ಕೂಟ ಆಯೋಜಿಸಕೊಂಡು ಸರ್ಕಾರದ ವೈಫಲ್ಯತೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಹಾಗಾದರೆ ಚರ್ಚೆಯ ಮುಖಾಂಶಗಳೇನು? ಮುಂದೆ ಓದಿ…

ಬಿಎಸ್ ವೈ ಸರ್ಕಾರದ ಕುರಿತು ಶಾಸಕರುಗಳಿಗೆ ಇರುವ ಮುಖ್ಯ ಅಸಮಾಧಾನಗಳು ಇಂತಿವೆ: ಸರ್ಕಾರದಲ್ಲಿ ಯಡಿಯೂರಪ್ಪನ ಮಕ್ಕಳ ಅತಿಯಾದ ಮೂಗು ತೂರುವಿಕೆ, ಜಾತಿ ರಾಜಕಾರಣ, ಯಡಿಯೂರಪ್ಪನ ಕುಟುಂಬದವರಿಂದ ಸರ್ಕಾರದಲ್ಲಿ ಅತಿಯಾದ ಹಸ್ತಕ್ಷೇಪ, ಕಮಿಷನ್ ತೆಗೆದುಕೊಳ್ಳುವುದು, ನಿಷ್ಠಾವಂತ ಶಾಸಕರಿಗೆ ಅನುದಾನವಾಗಲಿ ಸ್ಥಾನಮಾನವಾಗಲಿ ನೀಡದೆ ಇರುವುದು, ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯದ ಕೊರತೆ ಹೇಗೆ ಹಲವಾರು ಕುಂದು ಕೊರತೆಗಳ ಬಗ್ಗೆ ಶಾಸಕರು ಚರ್ಚೆ ನೆಡಿಸಿ ದೂರು ಕೊಡುವ ಬಗ್ಗೆ ಕೈಗೊಂಡಿದ್ದಾರೆ ನಿರ್ಧಾರ ಕೈಗೊಳ್ಳಲಾಗಿದೆ.

ಹಾಗಾದರೆ ಕೊನೆಗೂ ಈ ಕೆಟ್ಟ ಸರ್ಕಾರಕ್ಕೆ ಬಿಜೆಪಿ ಶಾಸಕರಿಂದಲೇ ಅಂತ್ಯ ಹಾಡಲಾಗುತ್ತದೆಯೇ? ಕಾದು ನೋಡಬೇಕಿದೆ!

Leave a Reply