ಬಿ.ಎಸ್ ಯಡಿಯೂರಪ್ಪ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗಲಿನಿಂದಲೂ ಸಾಲು ಸಾಲು ಯಡವಟ್ಟಿನ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ರಾಜ್ಯದಲ್ಲಿ ಅತಂತ್ರ ಸೃಷ್ಟಿಸಿದ್ದಾರೆ. ಇದರಿಂದ ಸಾಮಾನ್ಯ ಪ್ರಜೆಗಳು ಗೊಂದಲದಲ್ಲಿ ಸಿಲುಕಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಕೋರೋನ ವೈರಾಣು ನಿಯಂತ್ರಣದಲ್ಲೂ ವೈಫಲ್ಯತೆ ತೋರಿದ ರಾಜ್ಯ ಸರ್ಕಾರದ ಮೇಲೆ ಜನ ಆಕ್ರೋಶ, ಅಸಮಾಧಾನ ಹೊರಹಾಕುತ್ತಿದ್ದಾರೆ.

ಈಗ ಚಿತ್ರರಂಗದ ಸದಸ್ಯರು ಸಹ ಯಡಿಯೂರಪ್ಪನ ಎಡಬಿಡಂಗಿ ನಿರ್ಧಾರಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಶೇ ೧೦೦ ರಷ್ಟು ಜನರನ್ನು ಸೇರಿಸುವದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದರೂ ಸಹ, ರಾಜ್ಯ ಸರ್ಕಾರ ನೀಡಿಲ್ಲ. ಇದರ ಬಗ್ಗೆ ಧ್ರುವ ಸರ್ಜಾ ಟ್ವೀಟ್ ಮಾಡುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ” ಮಾರ್ಕೆಟ್ ನಲ್ಲಿ ಗಿಜಿ ಗಿಜಿ ಜನ, ಬಸ್ ನಲ್ಲೂ ಫುಲ್ ರಶ್, ಆದರೆ ಚಿತ್ರಮಂದಿರಕ್ಕೆ ಮಾತ್ರ ಏಕೆ ೫೦% ನಿರ್ಬಂಧ?” ಎಂದು ಮುಖ್ಯಮಂತ್ರಿ ಬಿ.ಎಸ್.ವೈ ರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.
@drashwathcn @CMofKarnataka @mla_sudhakar #KFIrequestsfulloccupancy pic.twitter.com/S7rxIUlAPM
— Dhruva Sarja (@DhruvaSarja) February 3, 2021