ಅಪ್ರಾಪ್ತೆಯ ಅತ್ಯಾಚಾರಿಗಳು ಎಷ್ಟೇ ಪ್ರಬಲರಾಗಿರಲಿ ಅವರನ್ನುಕೂಡಲೇ ಬಂಧಿಸಿ: ಜೆಡಿಎಸ್ ಮುಖಂಡರ ಆಗ್ರಹ

ಶೃಂಗೇರಿಯಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಹಲವು ತಿಂಗಳಗಳ ಕಾಲ 30 ಮಂದಿ ಕಾಮ ಪಿಶಾಚಿಗಳು ಸೇರಿ ಅತ್ಯಾಚಾರ ಎಸಗಿರುವ ಸುದ್ದಿ ಇಡೀ ರಾಜ್ಯವನ್ನೇ ನಲುಗಿಸಿದೆ. ದೆಹಲಿಯಲ್ಲಿ, ಉತ್ತರ ಪ್ರದೇಶದದಲ್ಲಿ ಕೇಳಿ ಬರುತ್ತಿದ್ದ ಇಂತಹ ಘಟನೆಗಳು ಈಗ ನಮ್ಮ ರಾಜ್ಯದಲ್ಲೂ ಸಂಭವಿಸಿರುವುದು ನಿಜಕ್ಕೂ ದುರಂತ. ಇದರ ವಿರುದ್ಧ ಜೆಡಿಎಸ್ ಮುಖಂಡರು ಸಿಡಿದೆದಿದ್ದಾರೆ.

ಜೆಡಿಎಸ್ ಮುಖಂಡರು ಅತ್ಯಾಚಾರಿಗಳು ಎಷ್ಟೇ ಪ್ರಬಲರಾಗಿರಲಿ ಅವರನ್ನು ತಕ್ಷಣವೇ ಬಂಧಿಸಲೇ ಬೇಕು ಎಂದು ಅಗ್ರಹಿಸಿದ್ದಾರೆ. ಇದರ ಕುರಿತು ಜೆಡಿಎಸ್ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಜಲ್ಲಿ ಕ್ರಷರ್ ಕಾರ್ಯನಿರ್ವಹಿಸಲು ಬಂದಿದ್ದ ಅಪ್ರಾಪ್ತ ಬಾಲಕಿಯ ಮೇಲೆ ನಡೆದಿರುವ ಅತ್ಯಾಚಾರ ಹೇಯ ಕೃತ್ಯವಾಗಿದ್ದು, ಇಡೀ ಸಮಾಜವೇ ತಲೆತಗ್ಗಿಸುವಂತ್ತಾಗಿದೆ. ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಪ್ರಕರಣದಲ್ಲಿ ಯಾವೊಬ್ಬ ಅಪರಾಧಿಯೂ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ ಅತ್ಯಾಚಾರ ಸಂತ್ರಸ್ತೆ ತಬ್ಬಲಿಯಾಗಿದ್ದು, ಬಾಲಕಿಯ ಜವಾಬ್ದಾರಿಯನ್ನು ಸರ್ಕಾರ ಹೊರಬೇಕು. ಆಕೆಗೆ ಸರ್ಕಾರಿ ಕೆಲಸ ನೀಡುವ ಮೂಲಕ ಜೀವನೋಪಾಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಪಕ್ಷದ ಮಹಾಪ್ರಧಾನ ಕಾರ್ಯದರ್ಶಿ ಜೆ. ಎಸ್ ಚಂದ್ರಪ್ಪ, ಯುವಜನತಾದಳ ಜಿಲ್ಲಾಧ್ಯಕ್ಷ ಹೆಚ್.ಡಿ ವಿನಯ್ ರಾಜ್, ಜಿಪಿ ಸದಸ್ಯ ನಿಖಿಲ್ ಚಕ್ರವರ್ತಿ, ಯುವ ಜನತಾದಳ ಅಧ್ಯಕ್ಷರು ಶಂಕರಾಪುರಿ ಗೋಪಿ ಪ್ರಸ್ತುತರಿದ್ದರು.

Leave a Reply