ಯಡಿಯೂರಪ್ಪ ವಯೋಸಹಜ ಕಾಯಿಲೆಯಿಂದ ನರಳುತ್ತಿದ್ದಾರೆ; ಅವರಿಗೆ ಬುದ್ಧಿ ಭ್ರಮಣೆಯಾಗಿದೆ: ಜಯಮೃತ್ಯುಂಜಯ ಸ್ವಾಮೀಜಿ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಾವು ಕೇವಲ ಕೇಂದ್ರ ಬಿಜೆಪಿ ನಾಯಕರ ಕೀಲು ಗೊಂಬೆ ಎಂದು ಕೊನೆಯ ದಿನದ ಅಧಿವೇಶನದಲ್ಲಿ ಒಪ್ಪಿಕೊಂಡಿದ್ದಾರೆ. ತಾವೇ ಚುನಾವಣೆಗೆ ಮುನ್ನ ನೀಡಿದ ಭರವಸೆಗಳನ್ನು ಈಗ ಈಡೇರಿಸಲಾಗದೆ ಹೆಣಗಾಡುತ್ತಿದ್ದಾರೆ.

ಯಡಿಯೂರಪ್ಪ ಚುನಾವಣೆಗೂ ಮುನ್ನ ತಾವು ಮುಖ್ಯಮಂತ್ರಿ ಆದರೆ ಪಂಚಮಸಾಲಿ ಲಿಂಗಾಯಿತ ಸಮುದಾಯವನ್ನು 2ಎ ಪಂಗಡಕ್ಕೆ ಸೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಅವರಿಗೆ ಲಿಂಗಾಯತ ಸಮುದಾಯದ ಮತದಾರರನ್ನು ಸೆಳೆಯುವ ಹುಮ್ಮಸ್ಸಿನಲ್ಲಿ ನೀಡಿದ ಆ ಭರವಸೆಯೇ ಮುಳುವಾಗಿದೆ.

ಅಧಿವೇಶನದಲ್ಲಿ ಬಸನಗೌಡ ಯತ್ನಾಳ್ ಅವರು ಈ ಕುರಿತಾಗಿ ಕೇಳಿದಾಗ ಯಡಿಯೂರಪ್ಪ : “ನಮ್ಮದು ರಾಷ್ಟ್ರೀಯ ಪಕ್ಷ, ಪ್ರಾದೇಶಿಕ ಪಕ್ಷವಲ್ಲ. ನಾನು ಏನೇ ನಿರ್ಧಾರ ಕೈಗೊಳ್ಳಬೇಕೆಂದರು ಪ್ರಧಾನಿಗಳು ಮತ್ತು ಇತರೆ ಕೇಂದ್ರದ ನಾಯಕರ ಅನುಮತಿ ಪಡೆದುಕೊಂಡು ಮಾಡಬೇಕು. ಆದ್ದರಿಂದ ಈ ವಿಷಯದ ಕುರಿತು ನನ್ನಿಂದ ಏನು ಮಾಡಲು ಸಾಧ್ಯವಿಲ್ಲ.” ಎಂದು ಕಡ್ಡಿ ಮುರಿದಂತೆ ಹೇಳಿಬಿಟ್ಟರು. ಆದರೆ ಇದೇ ಯಡಿಯೂರಪ್ಪನವರು ಇತ್ತೀಚೆಗೆ ಲಿಂಗಾಯಿತ ಸಮುದಾಯವನ್ನು 2ಎ ಪಂಗಡಕ್ಕೆ ಸೇರಿಸುವುದಕ್ಕೆ ಶಿಫಾರಸ್ಸು ಮಾಡುವುದಾಗಿ ಪುನಃ ತಾವೇ ಹೇಳಿಕೊಂಡಿದ್ದರು ಎಂಬ ಸಂಗತಿ ಗಮನಾರ್ಹ.

ಸಹಜವಾಗಿಯೇ ಲಿಂಗಾಯತ ಸಮುದಾಯವನ್ನು 2ಎ ಪಂಗಡಕ್ಕೆ ಸೇರಿಸುವ ಕುರಿತು ಪಾದಯಾತ್ರೆ ಮಾಡುತ್ತಿರುವ ಜಯಮೃತ್ಯುಂಜಯ ಸ್ವಾಮೀಜಿಗಳು ಯಡಿಯೂರಪ್ಪನವರ ಈ ಎರಡು ನಳಿಗೆ ನಡೆತೆಯನ್ನು ನಿಂಧಿಸಿದ್ದಾರೆ. “ಅಧಿವೇಶನದಲ್ಲಿ ಇಂತಹ ಉಡಾಫೆ, ಅಡ್ಡ ಗೋಡೆಯ ಮೇಲೆ ದೀಪವಿಡುವಂತಹ ಮಾತುಗಳನ್ನು ಆಡುವುದರ ಮೂಲಕ ಪಂಚಮಸಾಲಿಗರನ್ನು ನಿರ್ಲಕ್ಷ್ಯ ಮಾಡುತ್ತಿರುವುದು ಗೊತ್ತಾಗುತ್ತಿದೆ. ನಿರ್ಲಕ್ಷ್ಯ ಮಾಡುತ್ತಿದ್ದರೋ ಅಥವಾ ಅವರಿಗೆ ತಲೆ ಸರಿ ಇಲ್ಲವೋ ಗೊತ್ತಾಗುತ್ತಿಲ್ಲ. ನೆನ್ನೆ ಸಿಹಿ ಕೊಟ್ರಿ, ಇಂದು ವಿಷ ಕೊಡುತ್ತಿದ್ದೀರಾ. ಯಡಿಯೂರಪ್ಪ ವಯೋಸಹಜ ಕಾಯಿಲೆಯಿಂದ ನರಳುತ್ತಿದ್ದಾರೆ; ಅವರಿಗೆ ಬುದ್ಧಿ ಭ್ರಮಣೆಯಾಗಿದೆ, ಅವರಿಗೆ ಬುದ್ದಿ ಸೀಮಿತವಿಲ್ಲ. ಅವರು ಕೂಡಲೇ ರಾಜೀನಾಮೆ ಕೊಟ್ಟು ಮತೊಬ್ಬ ಸಮರ್ಥ ನಾಯಕರನ್ನು ಮುಖ್ಯಮಂತ್ರಿ ಮಾಡಬೇಕು” ಎಂದು ಆಕ್ರೋಶ ಹೊರಹಾಕಿದ್ದಾರೆ.

Leave a Reply