ಗಾಣದಾಳ ಗ್ರಾಮದಲ್ಲಿ ದೇವೇಗೌಡರ ಪ್ರತಿಮೆ ನಿರ್ಮಿಸಿದ ಕಟ್ಟಾ ಅಭಿಮಾನಿ

ಭಾರತ ದೇಶಕ್ಕೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಕೊಡುಗೆ ಅಪಾರ. ಅದರಲ್ಲೂ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಬಡವರ, ದೀನ-ದಲಿತರ, ಕೃಷಿಕರ ಧ್ವನಿಯಾಗಿ ಅವರುಗಳ ಜೀವನ ಸುಧಾರಣೆಗೆ ಸಾಕಷ್ಟು ದಣಿದಿದ್ದಾರೆ. ಇದೇ ಕಾರಣದಿಂದ ಅವರೊಂದಿಗೆ ಫೋಟೋ ತೆಗಿಸಿಕೊಳ್ಳಲು, ಉಡುಗೊರೆ ನೀಡಿ ಗೌರವಿಸಲು, ಅಥವಾ ಸಹಾಯ ಕೇಳಲು ಅವರ ನಿವಾಸಕ್ಕೆ ಪ್ರತಿನಿತ್ಯ ಹಲವಾರು ಮಂದಿ ಬರುತ್ತಾರೆ. ಕೆಲವರು ದೇವೇಗೌಡರ ಮುಖದ ಟ್ಯಾಟೂ/ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಾರೆ. ಆದರೆ ಗೌಡರ ಕಟ್ಟಾ ಅಭಿಮಾನಿಯೊಬ್ಬರು ತಮ್ಮ ಅಭಿಮಾನವನ್ನು ಬೇರೆಯ ರೀತಿಯೇ ತೋರಿಸಿಕೊಂಡಿದ್ದಾರೆ.

ರಾಯಚೂರಿನ ಗಾಣದಾಳ ಗ್ರಾಮದಲ್ಲಿ ಪ್ರಭು ಗೌಡ ಎಂಬ ದೇವೇಗೌಡರ ಕಟ್ಟಾ ಅಭಿಮಾನಿಯೊಬ್ಬರು ಅವರ ಪ್ರತಿಮೆಯನ್ನು ನಿರ್ಮಿಸುವ ಮೂಲಕ ತಮ್ಮ ಪ್ರೀತಿ, ಅಭಿಮಾನ ಹಾಗೂ ಗೌರವ ವ್ಯಕ್ತಪಡಿಸಿದ್ದಾರೆ. ಇದನ್ನು ತಿಳಿದ ದೇವೇಗೌಡರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ಮುಂದೆ ಓದಿ…

ತಮ್ಮ ಮೇಲಿನ ಅಭಿಮಾನಕ್ಕೆ ಪ್ರಭು ಗೌಡ ಪ್ರತಿಮೆ ನಿರ್ಮಿಸಿದ್ದನ್ನು ತಿಳಿದು ಸ್ವತಃ ದೇವೇಗೌಡರೇ ಗಾಣದಾಳ ಗ್ರಾಮಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ! ಫೆಬ್ರವರಿ ೧೦ ರಂದು ದೇವೆದುರ್ಗದಲ್ಲಿ ಪಕ್ಷ ಸಂಘಟನೆಯ ಸಲುವಾಗಿ ಜೆಡಿಎಸ್ ಪಕ್ಷವು ಗೌಡರ ನೇತೃತ್ವದಲ್ಲಿ ಬೃಹತ್ ಸಮಾವೇಶವೊಂದನ್ನು ಹಮ್ಮಿಕೊಂಡಿದೆ. ಇಂದು ರಾಯಚೂರಿನ ಕಡೆಗೆ ರೈಲಿನಲ್ಲಿ ಗೌಡರು ಪ್ರಯಾಣ ಬೆಳೆಸಲಿದ್ದಾರೆ. ಹಾಗೆಯೆ ಪ್ರಭು ಗೌಡನು ಪ್ರತಿಮೆ ನಿರ್ಮಿಸಿರುವ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.

Leave a Reply