ಮೋದಿಯಿಂದ ಕನ್ನಡಿಗರಿಗೆ ದ್ರೋಹ; ಕೇಂದ್ರದ ತ.ನಾ ಕಾರ್ಯಕ್ರಮ ಸಂಪೂರ್ಣ ತಮಿಳು ಮಯ!

ಕೆಲವು ದಿನಗಳ ಹಿಂದೆ ಕರ್ನಾಟಕದ ಶಿವಮೊಗ್ಗದಲ್ಲಿ ಗೃಹ ಮಂತ್ರಿ ಅಮಿತ್ ಶಾ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಆಯೋಜಿತ ಕಾರ್ಯಕ್ರಮವೊಂದು ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಪ್ರತಿಯೊಂದು ಮಾಹಿತಿ ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಬರೆಯಲಾಗಿತ್ತು. ಕಾರ್ಯಕ್ರಮದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿ ಹಲವು ಮಂತ್ರಿಗಳು ಭಾಗಿಯಾಗಿದ್ದರೂ ಸಹ ಕರ್ನಾಟಕ ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಕೇಂದ್ರ ಸರ್ಕಾರ ಅವಮಾನಿಸುವುದನ್ನು ತಡೆಯುವ ಪ್ರಯತ್ನ ನಡೆಯಲಿಲ್ಲ ಎಂಬುದು ವಿಪರ್ಯಾಸ.

ಅಲ್ಲದೆ, ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಕನ್ನಡಿಗರೊಬ್ಬರು ಪ್ರಶ್ನಿಸಿದಾಗ, ‘ಕೇಂದ್ರ ಸರ್ಕಾರಕ್ಕೆ ಸೇರಿದ ಕಾರ್ಯಕ್ರಮಗಳ ವೇಳ ತ್ರಿಭಾಷಾ ಸೂತ್ರ ಪಾಲಿಸುವುದು ಕಡ್ಡಾಯವಲ್ಲ. ದ್ವಿಭಾಷಾ ಸೂತ್ರ ಪಾಲನೆ ಮಾಡಲಾಗುತ್ತದೆ’ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿ ಮೊಂಡತನ ಪ್ರದರ್ಶಿಸಿತ್ತು.

ನೆನ್ನೆಯ ದಿನ ತಮಿಳು ನಾಡಿನಲ್ಲಿ ನಡೆದ ಅದೇ ಕೇಂದ್ರ ಸರ್ಕಾರ ಆಯೋಜಿಸಿದ ಕಾರ್ಯಕ್ರಮವು ಸಂಪೂರ್ಣವಾಗಿ ತಮಿಳು ಮಯವಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದರು. ತಮಿಳು ನಾಡಿನಲ್ಲಿ ಚುನಾವಣೆ ಹೊಸ್ತಿಲಲ್ಲಿದ್ದು, ತಮಿಳು ನಾಡು ಮತದಾರರನ್ನು ಸೆಳೆಯಲು ಬಿಜೆಪಿ ಪಕ್ಷದ ತಂತ್ರವಿದು. ಅದೇ ತಮ್ಮದೇ ಸರ್ಕಾರವಿರುವ ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿ ನಂತರ ಪ್ರಶ್ನಿಸಿದಾಗ ದರ್ಪ ತೋರಿದ ಬಿಜೆಪಿ ಸರ್ಕಾರ ಚುನಾವಣೆ ಗೆಲ್ಲಲು ಹೇಸಿಗೆ ತಿನ್ನಲು ಸಹ ಸಿದ್ದ ಎಂದು ಬಿಜೆಪಿ ಮತ್ತೆ ಸಾಬೀತು ಪಡಿಸಿದೆ.

Leave a Reply