ಪ್ರಜಾ ಸ್ವಾತಂತ್ರ್ಯಕ್ಕೆ ಬಿಜೆಪಿಯಿಂದ ದಕ್ಕೆ; ಕಿರಾತಕ ನಟಿ ಮೋದಿ ವಿರುದ್ಧ ಟ್ವೀಟ್ ಮಾಡಿದಕ್ಕೆ ಕೇಸ್ ದಾಖಲು!

ಭಾರತ ದೇಶವು ಬಿಜೆಪಿ ಆಡಳಿತದಡಿ ಮಾನವ ‘ಸ್ವಾತಂತ್ರ್ಯ ಸೂಚ್ಯಂಕ’-2020 ರಲ್ಲಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 17 ಶ್ರೇಣಿ ಮುಗ್ಗರಿಸಿ 111 ಕ್ಕೆ ಕುಸಿದಿದೆ. ಬಿಜೆಪಿ ಆಡಳಿತದ ಕುರಿತು ಯಾರೇ ಟೀಕಿಸಿದರು, ಅಥವಾ ಬಿಜೆಪಿ ನಾಯಕರ ವಿರುದ್ಧ ಯಾರೇ ಟೀಕಿಸಿದರು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಈ ಫಾಸಿ ಸರ್ಕಾರದ ನಡತೆ ಜನರನ್ನು ಬೇಸತ್ತು ಹೋಗುವಂತೆ ಮಾಡಿದೆ.

ಇತ್ತೀಚೆಗೆ ಯಶ್ ನಟಿಸಿದ್ದ ಕನ್ನಡ ಸಿನಿಮಾ ನಾಯಕಿಯಾದ ಓವಿಯಾ ಪ್ರಧಾನಿ ನರೇಂದ್ರ ಮೋದಿ ತಮಿಳು ನದಿಗೆ ಭೇಟಿ ನೀಡಿದ ವೇಳೆ #gobackmodi ಎಂದು ಟ್ವೀಟ್ ಮಾಡಿದಕ್ಕೆ ಪ್ರಧಾನಿ ಮೋದಿ ವಿರುದ್ಧ ಸಾರ್ವಜನಿಕವಾಗಿ ಅಗೌರವ ತೋರಿದ ಹಾಗೂ ಪಿತೂರಿ ಸಂಚು ಮಾಡಿದ ಆರೋಪದಡಿಯಲ್ಲಿ ತಮಿಳುನಾಡು ಬಿಜೆಪಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಟೀಕೆಗಳನ್ನು ಎದುರಿಸುವ ಧೈರ್ಯವಿಲ್ಲದ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಣಹೇಡಿಯೇ ಸರಿ. ಸರ್ಕಾರದ ವಿರುದ್ಧ ಮಾತನಾಡುವವರು ದೇಶ ವಿರೋಧಿಗಳು ಎಂದು ಬಣ್ಣಿಸುವ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವವನ್ನು ಹತ್ತಿಕ್ಕಿ ಭಾರತದಲ್ಲಿ ಸಾರ್ವಭೌಮತ್ವ ಸ್ಥಾಪಿಸುತ್ತಿರುವುದಕ್ಕೆ ಇದು ಮತ್ತೊಂದು ಉದಾಹರಣೆ.

Leave a Reply