ರಾಮನ ಹೆಸರಲ್ಲಿ ಧಾರ್ಮಿಕ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆಲ್ಲ ಮುಂದೆ ತಕ್ಕ ಫಲ ಸಿಗಲಿದೆ – ಹೆಚ್.ಡಿ.ಕೆ

ಶ್ರೀ ರಾಮನ ಹೆಸರಿನಲ್ಲಿ ಈಗಾಗಲೇ ಎರಡೆರಡು ಬಾರಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಪಕ್ಷದ ಕರ್ನಾಟಕ ರಾಜ್ಯದ ನಾಯಕರು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅಯೋಧ್ಯೆಯಲ್ಲಿ ಹಲವಾರು ವರ್ಷದ ವಿವಾದ ಇತ್ಯರ್ಥವಾದ ಬಳಿಕ ಶ್ರೀ ರಾಮ ಮಂದಿರ ಕಟ್ಟಿಸಲು ಆರ್.ಎಸ್.ಎಸ್ ಸೇರಿದಂತೆ ಹಲವು ಹಿಂದೂ ಸಂಘಗಳು ದೇಶಾದ್ಯಂತ ಚಂದಾ ವಸೂಲಿ ಮಾಡುತ್ತಿದ್ದು, ದೇಣಿಗೆ ನೀಡಿದವರ ಮನೆಗಳಿಗೆ ಗುರುತು ಮಾಡುತ್ತಿರುವುದನ್ನು ಗಮನಿಸಿದ್ದಾರೆ.

ದೇಣಿಗೆ ನೀಡುವುದು ಸ್ವಯಿಚ್ಛೆಯಾಗಿರಬೇಕು ಎಂದು ಹೇಳಿ ಈ ಗುರುತು ಮಾಡುತ್ತಿರುವ ಅನುಮಾನಾಸ್ಪದ ಚಟುವಟಿಕೆಯನ್ನು ಜೆರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನಾಝಿ ಸಂಪ್ರದಾಯಕ್ಕೆ ಹೋಲಿಸಿ ಪ್ರಶ್ನಿಸಿದಕ್ಕೆ ರಾಜ್ಯ ಬಿಜೆಪಿ ನಾಯಕರು ಉರಿದು ಬೀಳುತ್ತಿದ್ದಾರೆ. ಹಾಗು ಕುಮಾರಸ್ವಾಮಿ ಅವರ ದೈವಭಕ್ತಿಯ ಬಗ್ಗೆ ಟೀಕಿಸುತ್ತಿದ್ದಾರೆ. ಇದಕ್ಕೆಲ್ಲ ಟ್ವಿಟ್ಟರ್ ಮೂಲಕ ಇಂದು ಕುಮಾರಸ್ವಾಮಿ ಅವರು ದಿಟ್ಟವಾಗಿ ಪ್ರತ್ಯುತ್ತರೇ ನೀಡಿದ್ದಾರೆ.

ಕುಮಾರಸ್ವಾಮಿ ಅವರು ಮಾಡಿದ ಸರಣಿ ಟ್ವೀಟ್ ಗಳು ಇಂತಿವೆ:

Leave a Reply