ನಮ್ಮದೇ ಪಕ್ಷದ ಸರ್ಕಾರವಿದ್ದರೂ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಬೇಕಾಗಿದೆ: ಬಿಜೆಪಿ ಶಾಸಕರ ಅಳಲು

ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಪಕ್ಷವು 2008 ರಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಿದಾಗ ಅತ್ಯಂತ ಭ್ರಷ್ಟ ಸರ್ಕಾರ ಎಂಬ ಹಣೆಪಟ್ಟಿ ಪಡೆದುಕೊಂಡಿತ್ತು. ಚೆಕ್ ಮೂಲಕ ಲಂಚ ಪಡೆದ ಆರೋಪದಡಿ ರಾಜ್ಯದ ಪ್ರಸ್ತುತ ಮುಖ್ಯಮಂತ್ರಿಯೂ ಆಗಿರುವ ಬಿ.ಎಸ್ ಯಡಿಯೂರಪ್ಪ ಅವರನ್ನು 2011 ರಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು. ದೇಶದಲ್ಲೇ ಮೊದಲ ಬಾರಿಗೆ ಮುಖ್ಯಮಂತ್ರಿ ಹುದ್ದೆಯಲ್ಲಿದ್ದ ಒಬ್ಬರು ಭ್ರಷ್ಟಾಚಾರ ಪ್ರಕರಣದಡಿ ಜೈಲಿಗೆ ಹೋದ ಕುಖ್ಯಾತಿ ಪಡೆದುಕೊಂಡರು.

8 ವರ್ಷಗಳ ನಂತರ ಬಹುಮತ ಪಡೆಯಲು ವಿಫಲರಾದರು ಸಹ ಅಧಿಕಾರ ದಾಹದಿಂದ ಆಡಳಿತ ಪಕ್ಷಗಳ ಶಾಸಕರಿಗೆ ಹಣ ಹಾಗು ಅಧಿಕಾರದ ಆಮಿಷವೊಡ್ಡಿ ‘ಆಪರೇಷನ್ ಕಮಲಾ’ ನಡೆಸಿ ಹಿಂಬಾಗಿಲಿನಿಂದ ಮತ್ತೆ ವಿಧಾನ ಸೌಧಕ್ಕೆ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಯಡಿಯೂರಪ್ಪನವರ ಸರ್ಕಾರದ ಕುರಿತು ಮತ್ತೆ ಅದೇ ಆರೋಪಗಳು ಕೇಳಿ ಬರುತ್ತಿವೆ.

ಸುಮಾರು 20 ರಿಂದ 30 ಬಿಜೆಪಿ ಶಾಸಕರು ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರ ಬಳಿ ಹೋಗಿ ತಮ್ಮದೇ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮ್ಮದೇ ಸರ್ಕಾರವಿದ್ದರೂ ಸಹ ಲಂಚ ಕೊಟ್ಟು ಕೆಲಸಗಳನ್ನು ಮಾಡಿಸಿಕೊಳ್ಳುವ ಪರಿಸ್ಥಿತಿ ಇದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ಇನ್ನೂ ಕೆಲವರು ಯಡಿಯೂರಪ್ಪನ ಮಗ ವಿಜೇಯೇಂದ್ರ ನಡೆಸುತ್ತಿರುವ ದಂಧೆಗಳ ವಿರುದ್ಧ ಹಾಗು ಸರ್ಕಾರದಲ್ಲಿ ಅವನ ಹಸ್ತಕ್ಷೇಪದ ಬಗ್ಗೆ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

Leave a Reply