ರಾಜ್ಯದ ಪ್ರಾದೇಶಿಕತೆ ಉಳಿಸಲು ಮೈಸೂರು ಪಾಲಿಕೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆ – ಹೆಚ್.ಡಿ.ಕೆ

ಇಂದು ನಡೆಯಲಿರುವ ಮೈಸೂರು ನಗರ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ನಿಲುವು ಎಲ್ಲರ ಕುತೂಹಲ ಕೆರಳಿಸಿತ್ತು. ಇದಕ್ಕೆ ಸ್ವತಃ ಜೆಡಿಎಸ್ ಪಕ್ಷದ ನಾವಿಕ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ತೆರೆ ಎಳೆದಿದ್ದಾರೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ಜೆಡಿಎಸ್ ಮೈಸೂರು ನಗರ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಚುನಾವಣೆಯಲ್ಲಿ ಸ್ವಂತತ್ರವಾಗಿ ಸ್ಪಿರಾಧಿಸಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ನಾಲಿಗೆ ಹರಿಬಿಡುತ್ತಿರುವವರಿಗೆ ಜೆಡಿಎಸ್ ಪಕ್ಷದ ಶಕ್ತಿಯನ್ನು ಸಾಬೀತು ಪಡಿಸಬೇಕಾಗಿದೆ. ಕಾಂಗ್ರೆಸ್ ಪಕ್ಷವು ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಜೆಪಿಯ ಬಿ-ಟೀಮ್ ಎಂದು ರಾಜ್ಯದಲ್ಲಿ ಅಪಪ್ರಚಾರ ಮಾಡಿದ್ದಾರೆ. ಆದ್ದರಿಂದ ನಾವು ಯಾವ ಪಕ್ಷದ ಬಿ-ಟೀಮ್ ಸಹ ಅಲ್ಲ ನಾಡಿನ ಆರೂವರೆ ಕೋಟಿ ಜನರ ಬಿ-ಟೀಮ್ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ.

ಅಲ್ಲದೆ ಬಿಜೆಪಿ ಪಕ್ಷವು ರಾಜ್ಯದ ಜನರಿಗೆ ಪ್ರತಿಯೊಂದು ವಿಚಾರದಲ್ಲೂ ದ್ರೋಹ ಬಗೆಯುತ್ತಿದೆ. ಆದ್ದರಿಂದ ರಾಜ್ಯದ ಪ್ರಾದೇಶಿಕತೆ ಉಳಿಸಲು ಹಾಗು ನಮ್ಮ ನೆಲ, ಜಲಕ್ಕೆ ನಮ್ಮ ಪಕ್ಷಕ್ಕಿರುವ ಜವಾಬ್ದಾರಿಯನ್ನು ತೋರಲು ಜೆಡಿಎಸ್ ಪಕ್ಷವು ಸ್ವತಂತ್ರವಾಗಿ ಹೋರಾಟ ಮಾಡಲಿದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

Leave a Reply