ಏನಿದು ಕುಮಾರಸ್ವಾಮಿ ಅವರ ಕನಸಿನ ಪಂಚರತ್ನ ಯೋಜನೆ?

ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಎರಡು ಬಾರಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸುವಾಗ ಸಾಕಷ್ಟು ಆಕರ್ಷಿಕ ಯೋಜನೆಗಳು ಹಾಗು ಕಾರ್ಯಕ್ರಮಗಳನ್ನು ರಾಜ್ಯಕ್ಕೆ ನೀಡಿದ್ದಾರೆ. ಇವುಗಳನ್ನು ರಾಜ್ಯದ ಜನರೂ ಸಹ ಮೆಚ್ಚಿ ಕುಮಾರಸ್ವಾಮಿ ಅವರನ್ನು ಜನಪರ ಮುಖ್ಯಮಂತ್ರಿ ಎಂದು ಪರಿಗಣಿಸುತ್ತಾರೆ. Ranker ಎಂಬ ವೆಬ್ ಸೈಟ್ ಒಂದು ನಡೆಸಿದ ಸಮೀಕ್ಷೆಯಲ್ಲಿ ಜನರು ಹೆಚ್.ಡಿ ಕುಮಾರಸ್ವಾಮಿ ಅವರನ್ನು ಕರ್ನಾಟಕದ ಅತ್ಯುತ್ತಮ ಮುಖ್ಯಮಂತ್ರಿ ಎಂದು ವರದಿ ಮಾಡಿದೆ. ಹೀಗಾಗಿ ಇಂತಹ ಪ್ರಗತಿಪರ ನಾಯಕ ರಾಜ್ಯದ ಮುಖ್ಯಮಂತ್ರಿ ಆಗಿ ಮತ್ತೆ ಆಯ್ಕೆ ಆಗಬೇಕು ಎಂಬುದು ರಾಜ್ಯದ ಜನರ ಇಚ್ಛೆಯಾಗಿದೆ.

ಕುಮಾರಸ್ವಾಮಿ ಅವರು ಈಗಾಗಲೇ ಒಂದಾದ ಮೇಲೆ ಒಂದರಂತೆ ರಾಜ್ಯಾದ್ಯಂತ ಹಲವು ಬೃಹತ್ ಸಮಾವೇಶಗಳನ್ನು ಹಮ್ಮಿಕೊಳ್ಳುವ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆಗೆ ಜೆಡಿಎಸ್ ಪಕ್ಷದ ಸಂಘಟನೆ ಹಾಗು ಪಕ್ಷದ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಮೇವಶಗಳಲ್ಲಿ ಕುಮಾರಸ್ವಾಮಿ ಅವರು ಇತರೇ ರಾಜಕೀಯ ನಾಯಕರನ್ನು ಟೀಕಿಸುವ ಬದಲು ಕೇವಲ ಪ್ರಸ್ತುತ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ಹಿಡಿದು ತಮ್ಮ ಮುಂದಿನ ಯೋಜನೆಗಳನ್ನು ಜನರಿಗೆ ತಿಳಿಸಿ ಮತ ಕೇಳುತ್ತಿರುವುದು ಶ್ಲಾಘನೀಯ. ಕುಮಾರಸ್ವಾಮಿ ಅವರು 2023 ರಲ್ಲಿ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಪಂಚರತ್ನ ಯೋಜನೆಯನ್ನು ಜಾರಿಗೆ ತರುವುದಾಗಿ ಎಲ್ಲೆಡೆ ತಿಳಿಸುತ್ತಿದ್ದಾರೆ. ಇದು ಎಲ್ಲರ ಗಮನ ಸೆಳೆಯುತ್ತಿದೆ. ಹಾಗಾದರೆ ಏನಿದು ಕುಮಾರಸ್ವಾಮಿ ಅವರ ಆಕರ್ಷಿಕ ಪಂಚರತ್ನ ಯೋಜನೆ? ಮುಂದೆ ಓದಿ.

ಪಂಚರತ್ನ ಯೋಜನೆಯು ರಾಜ್ಯದ ಪ್ರಜೆಗಳ ಸರ್ವತೋನ್ಮುಖ ಅಭಿವೃದ್ಧಿಯ ಸುತ್ತ ಕೇಂದ್ರೀಕರಿಸಲಾಗಿದೆ. ಯೋಜನೆಯ ಹೆಸರೇ ಸೂಚಿಸುವಂತೆ ಇದು ಐದು ಕಾರ್ಯಕ್ರಮಗಳಿಂದ ಕೂಡಿದ್ದು, ಅವುಗಳು ಇಂತಿವೆ:

೧. ವಸತಿ
ಪ್ರತಿಷ್ಠಿತ ದಿನಪತ್ರಿಕೆ ಡೆಕ್ಕನ್ ಹೆರಾಲ್ಡ್ 2020 ರಲ್ಲಿ ವರದಿ ಮಾಡಿರುವ ಸಮೀಕ್ಷೆಯೊಂದರ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಸುಮಾರ 36 ಲಕ್ಷಕ್ಕೂ ಅಧಿಕ ವಸತಿ ರಹಿತ ಜನರಿದ್ದಾರೆ. ಈ ಸಮಸ್ಯೆಯನ್ನು ಗಮನಿಸಿರುವ ಕುಮಾರಸ್ವಾಮಿ ಅವರು ತಾವು ಮುಖ್ಯಮಂತ್ರಿ ಆಗಿ ಆಯ್ಕೆಯಾದ ಬಳಿಕ ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ವಸತಿ ಸೌಲಭ್ಯ ಕಲ್ಪಿಸಿಕೊಡುವಂತೆ ಆಶ್ವಾಸನೆ ನೀಡಿದ್ದಾರೆ.

೨. ಶಿಕ್ಷಣ
ಮನುಷ್ಯನಿಗೆ ಜೀವನದಲ್ಲಿ ಶಿಕ್ಷಣವು ಅತ್ಯಮೂಲ್ಯ ಅಸ್ತ್ರವಾಗಿದ್ದು, ದಿನನಿತ್ಯ ಆರ್ಥಿಕವಾಗಿ ಹಿಂದುಳಿದ ಹಲವಾರು ವಿದ್ಯಾರ್ಥಿಗಳು ಕುಮಾರಸ್ವಾಮಿ ಅವರ ಮನೆಗೆ ಸಹಾಯಹಸ್ತ ಬೇಡಿ ಹೋಗುತ್ತಾರೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದ ಬಳಿಕ ರಾಜ್ಯದಲ್ಲಿ ಉಚಿತವಾಗಿ LKG ಇಂದ 12 ನೇ ತರಗತಿಯ ವರೆಗೆ ಅಂತಾರಾಷ್ಟ್ರೀಯ ಗುಣಮಟ್ಟದ ಉಚಿತ ಶಿಕ್ಷಣ ಸೌಲಭ್ಯ ಕಲ್ಪಿಸುವುದಾಗಿ ಹೇಳಿದ್ದಾರೆ.

೩. ಅರೋಗ್ಯ
ಆರೋಗ್ಯದ ಮಹತ್ವದ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ. ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಚಿಕಿತ್ಸೆಗಾಗಿ ಲಕ್ಷಗಟ್ಟಲೇ ಖರ್ಚು ಮಾಡಬೇಕಾಗುತ್ತದೆ. ಇದು ಬಹುತೇಕ ಜನರಿಗೆ ಎಟಕದ ನಕ್ಷತ್ರವಾಗಿ ಕಾಡುತ್ತದೆ. ಆದ್ದರಿಂದ 30 ಲಕ್ಷ ರೂ. ಗಳ ವರೆಗೂ ಪ್ರಜೆಗಳಿಗೆ ಉಚಿತ ಚಿಕಿತ್ಸೆ ಪಡೆಯುವ ಸೌಲಭ್ಯವನ್ನು ಕಲ್ಪಿಸುವದು ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಯ ಒಂದು ವೈಶಿಷ್ಟ್ಯವಾಗಿದೆ.

೪. ಉದ್ಯೋಗ
ಉದ್ಯೋಗಂ ಪುರುಷ ಲಕ್ಷಣಂ ಎಂಬ ಕಾಲ ಹೋಗಿ ಈಗ ಎಲ್ಲರಿಗೂ ಉದ್ಯೋಗಾವಾಕ್ಷ ಅತ್ಯವಶ್ಯಕ ಹಾಗು ಅನಿವಾರ್ಯವಾಗಿದೆ. ಅಲ್ಲದೆ ದೇಶದ ವಿವಿಧ ಭಾಗಗಳಿಂದ ಉದ್ಯೋಗ ಆಲಿಸಿ ಬರುವ ಕರ್ನಾಟಕದಲ್ಲಿ ಕನ್ನಡಿಗರಿಗೆ ಪೈಪೋಟಿ ಅತಿರೇಕಕ್ಕೇರಿದೆ. ಆದ್ದರಿಂದ ರಾಜ್ಯದ ಎಲ್ಲಾ ಜನರಿಗೆ ಉದ್ಯೋಗಾವಕಾಶ ಕಲ್ಪಿಸಿಕೊಡುವುದು ಕುಮಾರಸ್ವಾಮಿ ಅವರ ಆದ್ಯತೆ ಆಗಿದೆ.

೫. ಕೃಷಿ
ಮಣ್ಣಿನ ಮಕ್ಕಳ ಪಕ್ಷವೆಂದೇ ಕೀರ್ತಿ ಪಡೆದಿರುವ ಜೆಡಿಎಸ್ ಪಕ್ಷದ ನಾವಿಕ ಕುಮಾರಸ್ವಾಮಿ ಅವರು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ 23 ಸಾವಿರ ಕೋಟಿಗೂ ಅಧಿಕ ಕೃಷಿ ಸಾಲ ಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವವರು. ಆದ್ದರಿಂದ ಇವರ ರೈತಪರ ಕಾಳಜಿ ಬಗ್ಗೆ ಯಾರೂ ಸಹ ಕೆಮ್ಮುವಂತಿಲ್ಲ. ಅವರು ಪುನಃ ಮುಖ್ಯಮಂತ್ರಿಯಾಗಿ ಆಯ್ಕೆ ಆದ ಬಳಿಕ ಕೃಷಿಕರ ಜೀವನ ಸುಧಾರಣೆಗೆ ಕ್ರಾಂತಿಕಾರಿ ಯೋಜನೆಗಳನ್ನು ಮಂಡಿಸುವಂತೆ ಪ್ರಾಮಾಣಿಸಿದ್ದಾರೆ.

ಇದು ಕುಮಾರಸ್ವಾಮಿ ಅವರ ಕನಸಿನ ಪಂಚರತ್ನ ಯೋಜನೆಯ ಸಂಕ್ಷಿಪ್ತ ವಿಶ್ಲೇಷಣೆಯಾಗಿದೆ. ಈ ಯೋಜನೆಗಳನ್ನು ತಮ್ಮ ಆಡಳಿತಾವಧಿಯಲ್ಲಿ ಹಂತ ಹಂತವಾಗಿ ಜಾರಿಗೆ ತರುವುದಾಗ ಅವರು ಹೇಳಿದ್ದಾರೆ. ಈ ಯೋಜನೆಯು ರಾಜ್ಯದ ಜನರಿಗೆ ಅತ್ಯಗತ್ಯವಾಗಿರುವ ಮೂಲಭೂತ ಸೌಕರ್ಯಗಳು ಹಾಗು ಅವರಿಗೆ ಕಾಡುತ್ತಿರುವ ಎಲ್ಲಾ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಭರವಸೆ ಮೂಡಿಸುವಂತ್ತಿದೆ.

One thought on “ಏನಿದು ಕುಮಾರಸ್ವಾಮಿ ಅವರ ಕನಸಿನ ಪಂಚರತ್ನ ಯೋಜನೆ?

Leave a Reply