ನನ್ನ ಕೊನೆ ಉಸಿರಿರುವವರೆಗೂ ಕಾವೇರಿಗಾಗಿ ಹೋರಾಡುವೆ – ಹೆಚ್. ಡಿ ದೇವೇಗೌಡರು

ತಮ್ಮ ಇಡೀ ಜೀವನವನ್ನೇ ಜನಪರ ಹೋರಾಟಕ್ಕಾಗಿ ಮುಡುಪಾಗಿಟ್ಟಿರುವ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ ದೇವೇಗೌಡ ಅವರು 88ರ ಇಳಿ ವಯಸ್ಸಿನಲ್ಲೂ ಅದೇ ಹುರುಪಿನೊಂದಿಗೆ ಕಾವೇರಿ ವಿಷಯದಲ್ಲಿ ನಮ್ಮ ನಾಡಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ ಹೋರಾಟ ಮಾಡಲು ಸಿದ್ಧವಿರುವುದಾಗಿ ಹೇಳಿದ್ದಾರೆ.

ಶುಕ್ರವಾರ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ಶಾಸಕ ಸಿ.ಎಸ್. ಪುಟ್ಟರಾಜು ನೇತೃತ್ವದಲ್ಲಿ ಆಯೋಜಿಸಿದ್ದ ಮೇಲುಕೋಟೆ ಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾಗಿರುವ ಜೆಡಿಎಸ್ ಬೆಂಬಲಿತ ಅಧ್ಯಕ್ಷರು, ಉಪಾಧ್ಯಕ್ಷರು ಹಾಗು ಸದಸ್ಯರುಗಳ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ದೇವೇಗೌಡರು ಕಾವೇರಿ ನೀರಿನ ಪರ ಧ್ವನಿ ಎತ್ತಿದ್ದರು.

ಕಾವೇರಿ ನದಿಯ ನೀರನ್ನು ತಮಿಳು ನಾಡು ಹೆಚ್ಚುವರಿಯಾಗಿ ಬಳಸಿಕೊಳ್ಳಲು ಬಿಡುವುದಿಲ್ಲ. ನನ್ನ ಶರೀರದಲ್ಲಿ ಉಸಿರುವವರೆಗೂ ರಾಜ್ಯದ ಜನಕ್ಕೆ ಕಾವೇರಿ ನೀರು ಉಳಿಸಿಕೊಡಲು ಹೋರಾಡುತ್ತೇನೆ ಎಂದು ಎಂದಿನಂತೆ ಕನ್ನಡಿಗರ ಪಾಲಿನ ಶಕ್ತಿಯಾಗಿ ದೇವೇಗೌಡರು ಪ್ರಾಮಾಣಿಸಿದರು.

Leave a Reply