ಕನ್ನಡ ಚಲನಚಿತ್ರ ಕಪ್ ಬಗ್ಗೆ ನಿಮಗೆ ಬೇಕಾದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ !!

ಕಿಚ್ಚ ಸುದೀಪ್ ಕೆಲವು ವರುಷಗಳ ಹಿಂದೆ ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್’ ನ ಮೂಲಕ ಸಿನಿಮಾ ರಂಗದವರನ್ನು ಒಂದು ವೇದೇಕೆಗೆ ತಂದಿದ್ದರು. ಹಿಂದಿ ಮತ್ತು ದಕ್ಷಿಣದ ಇತರೆ ಚಿತ್ರರಂಗಗಳು ಕೂಡ ತಂಡಗಳನ್ನು ರಚಿಸಿಕೊಂಡು ಮೈದಾನಕ್ಕಿಳಿದಿದ್ದರು. ಒಂದಷ್ಟು ವಿವಾದಗಳಾದರು ಸಿಸಿಎಲ್ ಕ್ಲಿಕ್ಕಾಗಿತ್ತು.

ಇದೀಗ ಸುದೀಪ್ ತಮ್ಮ ಐಡಿಯಾವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ದು ಕನ್ನಡ ಚಲನಚಿತ್ರ ಕಪ್ ನ ಮೂಲಕ  ಕಲಾವಿದರು ಹಾಗು ತಂತ್ರಜ್ಞರನ್ನು ಒಂದು ಮಾಡಿದ ಕಾರಣ ಈ ಲೀಗ್ ಸಂಚಲನ ಮೂಡಿಸಿತ್ತು. ಈ ಲೀಗ್ ನಲ್ಲಿ ಆರು ತಂಡಗಳಿದ್ದು ಆರು ನಿರ್ಮಾಪಕರು ಇದರ ಮಾಲೀಕರಾಗಿರುತ್ತಾರೆ. ಇನ್ನು ನಟರಾದ ಸುದೀಪ್, ಶಿವ ರಾಜಕುಮಾರ್, ಪುನೀತ್ ರಾಜಕುಮಾರ್, ಯಶ್, ರಕ್ಷಿತ್ ಶೆಟ್ಟಿ ಹಾಗು ದಿಗಂತ್ ಈ ಆರು ತಂಡಗಳ ಸ್ಟಾರ್ ಆಟಗಾರರಾಗಿ ಮಿಂಚಿದ್ದರು. ಇನ್ನು ರಣಜಿ ಕ್ರಿಕೆಟ್ ಆಡಿರುವ ಒಬ್ಬ ವೃತ್ತಿಪರ ಕ್ರಿಕೆಟಿಗ ಪ್ರತಿಯೊಂದು ತಂಡದಲ್ಲೂ ಆಡಿದ್ದರು . ಕೆಸಿಸಿ ಯ ಮೊದಲ ಆವೃತ್ತಿಯು ಜೀ ಕನ್ನಡದಲ್ಲಿ ಪ್ರಸಾರವಾಗಿತ್ತು. ಅನಿಲ್ ಕುಂಬ್ಳೆ ಮತ್ತು ವಿನಯ್ ಕುಮಾರ್ ಅವರ ಉಪಸ್ಥಿತ ಮನರಂಜನೆಯನ್ನು ದುಪಟ್ಟು ಮಾಡಿತು.  ಶಿವರಾಜ್​ಕುಮಾರ್​ ಸ್ಟಾರ್ ಪ್ಲೇಯರ್​ ಆಗಿದ್ದ ‘ವಿಜಯನಗರ ಪೇಟ್ರಿಯಾಟ್ಸ್’​ ತಂಡ ಕಪ್​ ಗೆದ್ದು ವಿಜೇತರಾಗಿದ್ದರು.
ಆದರೆ  ಈ ಬಾರಿ ದಿಗಂತ್ ಹಾಗು ರಕ್ಷಿತ್ ಶೆಟ್ಟಿ ಬದಲು ಗೋಲ್ಡನ್ ಸ್ಟಾರ್ ಗಣೇಶ್ ಹಾಗು ರಿಯಲ್ ಸ್ಟಾರ್ ಉಪೇಂದ್ರ ಸ್ಟಾರ್ ಆಟಗರಾಗಿ ಪಾಲ್ಗೊಳ್ಳುತ್ತಿದ್ದಾರೆ. ಹಾಗು  ಈ ಬಾರಿ ಅಂತರಾಷ್ಟ್ರೀಯ ಕ್ರಿಕೆಟಿಗರು ಪಾಲ್ಗೊಳ್ಳುತ್ತಿರುವುದು ವಿಶೇಷ. ವೀರೇಂದ್ರ ಸೆಹ್ವಾಗ್, ಆಡಮ್ ಗಿಲ್ಕ್ರಿಸ್ಟ್, ತಿಲಕರತನೇ ದಿಲ್ಶಾನ್, ಡೇವಿಡ್ ಜಾಕೋಬ್ಸ್, ಓವೈಸ್ ಷಾ ಕದಂಬ ಲಯನ್ಸ್, ವಿಜಯನಗರ ಪೇಟ್ರಿಯಾಟ್ಸ್, ವಡೆಯರ್ ಚಾರ್ಜರ್ಸ್, ಗಂಗಾ ವಾರಿಯರ್ಸ್ ಹಾಗು ರಾಷ್ಟ್ರಕೂಟ ಪ್ಯಾಂಥರ್ಸ್ ನ  ಪರ ಆಡಲಿದ್ದಾರೆ. ಅನುಕ್ರಮವಾಗಿ ಆರು ತಂಡಗಳ ಪರವಾಗಿ ಆಡುತ್ತಾರೆ.

ಇದೆ ಸಪ್ಟೆಂಬರ್ 8  ಮತ್ತು 9ರಂದು ಕೆಸಿಸಿ ಟೂರ್ನಮೆಂಟ್ ನೆಡಯಲಿದ್ದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತದೆ. ನಿಮ್ಮ ನೆಚ್ಚಿನ ನಟರು ಕ್ರಿಕೆಟ್ ಆಡುವುದನ್ನು ನೋಡುವ ಆಸೆ ನಿಮಗಿದ್ದರೆ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ವೀಕ್ಷಿಸಬಹುದು.